ಬಂಟ್ವಾಳ: ರಸ್ತೆ ಬದಿಯ ಮೋರಿಯ ಮೇಲೆ ಕುಳಿತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕಾಲುಜಾರಿ ಮೋರಿಯೊಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಜ.6ರ ಮುಂಜಾನೆ ಬಂಟ್ವಾಳ ತಾಲೂಕಿನ ಕಲ್ಲಗುಡ್ಡೆ ವರಕ್ಕೋಡಿ ಎಂಬಲ್ಲಿ ನಡೆದಿದೆ. ಈ ರೀತಿಮೃತಪಟ್ಟ ದುರ್ದೈವಿಯನ್ನು ಬಡಗಬೆಳ್ಳೂರು ಗುರುವಪ್ಪ ಪೂಜಾರಿಯವರ ಮಗ ರೆಂಜಾಳ ನಿವಾಸಿ ಹರೀಶ್ (28) ಎಂದು ಗರುತಿಸಲಾಗಿದೆ.
ಮೋರಿಯ ಮೇಲೆ ಕುಳಿತಿದ್ದ ಹರೀಶ್ ಅವರು ಆಯತಪ್ಪಿ ಬಿದ್ದ ಭರಸಿಗೆ ಅವರ ತಲೆಯ ಕುತ್ತಿಗೆ ಭಾಗ ನೆಲಕ್ಕೆ ತಾಗಿದ್ದು, ಪರಿಣಾಮ ಅವರ ಮೂಳೆ ಮುರಿತಗೊಂಡಿದ್ದು ಸ್ಥಳದ್ದಲ್ಲೇ ಮ್ರತಪಟ್ಟಿದ್ದಾರೆ. ಬಂಟ್ವಾಳ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವಮಹಜರು ನಡೆಸಲಾಗಿದೆ. ಮ್ರತರು ತಂದೆ-ತಾಯಿ ಅಕ್ಕ ಮತ್ತು ತಮ್ಮನನ್ನು ಅಗಲಿದ್ದಾರೆ.






