ಬೆಳ್ತಂಗಡಿ: ಇಲ್ಲಿನ ನ.ಪಂ.ಸನಿಹವಿರುವ ಮಹಿಳಾ ಸಹಾಯವಾಣಿ ಸಾಂತ್ವನಕೇಂದ್ರಕ್ಕೆ ದುಷ್ಕರ್ಮಿಗಳು ಕಲ್ಲುತೂರಿದ ಘಟನೆ ನಡೆದಿದೆ.
ಆದಿತ್ಯವಾರರಾತ್ರಿ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದು ಇದರಿಂ ಕಟ್ಟಡದ ಗಾಜು ಪುಡಿಯಾಗಿದೆ. ಸಮಾಜ ಸೇವಕಿಯರು ಅದರೊಳಗಡೆ ಕರ್ತವ್ಯ ನಿರ್ವಹಿಸುತ್ತಿದ್ದಗಲೇ ಈ ಘಟನೆ ನಡೆದಿದ್ದು ಹೊರಬಂದು ನೋಡಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಬಗ್ಗೆ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
