ಸುರತ್ಕಲ್: ನಾಲ್ವರು ದುಷ್ಕರ್ಮಿಗಳ ತಂಡವೊಂದು ಉದ್ಯಮಿಯೋರ್ವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜನವರಿ ಆರರ ಮುಂಜಾನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಸೂರಿಂಜೆ ಸಮೀಪದ ಕೋಟೆ ಎಂಬಲ್ಲಿ ಜರುಗಿದೆ. ಕೊಲೆಗೀಡಾದ ವ್ಯಕ್ತಿಯನ್ನು ಕಾರ್‍ಲೈನ್ ಗ್ಯಾರೇಜ್ ಮಾಲಕ ಕೇಶವ ಶೆಟ್ಟಿ(40) ಎಂದು ಗುರುತಿಸಲಾಗಿದೆ. ಇವರ ಮೃತದೇಹ ಮನೆ ಸಮೀಪದ ಪೊದೆಯಂಚಿಲ್ಲಿ ಪತ್ತೆಯಾಗಿದೆ.
ಕೇಶವ ಶೆಟ್ಟಿ ಶಟಲ್ ಆಡುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳ ತಂಡ ಮಚ್ಚನಿಂದ ಕೊಚ್ಚಿ ಪರಾರಿಯಾಗಿರಬಹುದೆಂದು ಹೇಳಲಾಗಿದೆ. ಮಚ್ಚಿನೇಟಿಗೆ ಕೇಶವ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾವ್ವರು ಆರೋಪಿಗಳ ಪೈಕಿ ಇಬ್ಬರ ಸುಳಿವು ಪೊಲೀಸರಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ.
ಸೂರಿಂಜೆಯ ಕೋಟೆ ಎಂಬಲ್ಲಿ ಗಾಂಜಾ ವ್ಯವಹಾರ ಹೊಂದಿದ್ದರ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಇದರ ಹಗೆಯಿಂದ ದುಷ್ಕರ್ಮಿಗಳು ಈ ರೀತಿ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಕೇಶವ್ ಅವರು ಹೊಸಬೆಟ್ಟುವಿನಲ್ಲಿ ಕಾರ್‍ಲೈನ್ ಗ್ಯಾರೆಜ್ ಹೊಂದಿದ್ದರು. ಸುರತ್ಕಲ್ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





