ಪುತ್ತೂರು: ಇಲ್ಲಿನ ಪ್ರಮುಖ ಕೇಂದ್ರ ಪ್ರದೇಶದ ಸಿಂಡಿಕೇಟ್ ಬ್ಯಾಂಕ್ ಬಳಿಯ ರೂಬಿ ಟವರ್ಸ್‍ನಿಂದ ಬಿದ್ದು ಕಾರ್ಮಿಕನೊಬ್ಬ ಮೃತ ಪಟ್ಟ ಘಟನೆ ಇಂದು ಮುಂಜಾನೆ 7ರ ಹೊತ್ತಿಗೆ ನಡೆದಿದೆ.

accident puttur

Putturu News.
ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಕಾಸರಗೋಡು ಮೂಲದ ಸಲೀಂ(41) ಎಂದು ಗುರುತಿಸಲಾಗಿದೆ. ಈತ ರೂಬಿ ಟವರ್ಸ್‍ನಲ್ಲಿ ಮೇಸ್ತ್ರಿ ಕಾಮಗಾರಿ ಮಾಡುತ್ತಿದ್ದನಲ್ಲದೇ ಅದೇ ಕಟ್ಟಡದಲ್ಲಿ ವಾಸ್ತವ್ಯ ಹೂಡಿದ್ದನು ಎನ್ನಲಾಗಿದೆ. ಬೆಳಿಗ್ಗೆ ಮೇಸ್ತ್ರಿ ಕೆಲಸಕ್ಕೆಂದು ಕಟ್ಟಡದ 4ನೇ ಮಹಡಿಯಲ್ಲಿ ಮರದ ಹಲಗೆಯನ್ನು ಕಟ್ಟುತ್ತಿದ್ದ ವೇಳೆ ಲಿಂಟಲ್ ಬೀಮ್ ತುಂಡಾಗಿ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರ ಕೊಠಡಿಯಲ್ಲಿ ಇರಿಸಲಾಗಿದೆ. ಪೊಲೀಸರು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *