ಸುದ್ದಿ 9 ಕೈಕಂಬ : ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವ ಮಾಳವಿಕ , ಮತ್ತು ತೇಜಸ್ವಿ ಸೂರ್ಯ
ಮೋದಿ ಎಂಬ ಕೃಷ್ಣ ಅಲ್ಲಿ ಧರ್ಮವಂತ ರಾಜಕೀಯ ಕಟ್ಟಿಟ್ಟ ಬುತ್ತಿ: ತೇಜಸ್ವಿ ಸೂರ್ಯ
ಭಗವದ್ಗೀತೆಯ ಕಡೆಯ ಶ್ಲೋಕದಲ್ಲಿ ಸಂಜಯ ಹೇಳುತ್ತಾನೆ, ಯಾವ ಕಡೆ ಯೋಗೇಶ್ವರನಾದ ಶ್ರೀ ಕೃಷ್ಣ ಇರುತ್ತಾನೋ ಯಾವ ಕಡೆ ಗಾಂಢೀಯಾದ ಅಜರ್ುನ ಇರುತ್ತಾನೋ ಅಲ್ಲಿ ಧರ್ಮವಂತ ರಾಜಕೀಯ ಕಟ್ಟಿಟ್ಟ ಬುತ್ತಿ.
ಅದರಂತೆ ರಾಜಕೀಯ ಎಂಬ ಕುರುಕ್ಷೇತ್ರದಲ್ಲಿ ನರೇಂದ್ರ ಮೋದಿ ಎಂಬ ಕೃಷ್ಣ ಇರುತ್ತಾರೋ, ಎಲ್ಲಿ ಅಜರ್ುನನಂಥಾ ಮತದಾರರು ಇರುತ್ತಾರೋ ಅಲ್ಲಿ ಕೂಡಾ ಗೆಲವು ಭಾರತಕ್ಕೆ ಕಟ್ಟಿಟ್ಟ ಬುತ್ತಿ ಎಂದು ವಾಗ್ಮಿ ತೇಜಸ್ವಿ ಸೂರ್ಯ ನುಡುದರು.
ಅವರು ಎಡಪದವಿನಲ್ಲಿ ನಡೆದ ನಮೋ ಬ್ರಿಗೇಡ್ ಎಡಪದವು ವಲಯ ಆಯೋಜಿಸಿದ `ಭಾರತ ಗೆಲ್ಲಿಸಿ ಎಂಬ ಮೋದಿ ಉತ್ಸವ’ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತಾಡುತ್ತಿದ್ದರು.
ಈ ದೇಶವನ್ನು ಸೋನಿಯಾ ಗಾಂಧಿ ಮತ್ತು ಕುಟುಂಬ ಮಾರಲು ಹೊರಟಿದೆ. ದೇಶದ ಇಪ್ಪಾತಾರು ಕೋಟಿಗಳಲ್ಲಿ ಇರುವ ಬಡವರು ಈ ದೇಶದ ಎಂಟು ರಾಜ್ಯಗಳಲದಲಿದ್ದಾರೆ ಎಂದರೆ ಅರ್ಥವೇನು? ಈ ಪ್ರಪಂಚ ನೂರು ಕಿಮೀ ವೇಗದಲ್ಲಿ ಹೋಗುತ್ತಿದ್ದರೆ ಭಾರತ 8ಂ ಕಿಮೀ ಹಿಂದಕ್ಕೆ ಓಡಿಸುತ್ತಿದೆ. ಈ ಕಾಂಗ್ರೆಸ್ ಸರಕಾರ ಅರುವತ್ತು ವರ್ಷಗಳಲ್ಲಿ ಏನೆಲ್ಲಾ ಹಗರಣ ಮಾಡಬೇಕೋ ಅದನ್ನೆಲ್ಲಾ ಮಾಡಿದ ಈ ದೇಶದ ಸಂಪತ್ತನ್ನು ಲೂಟಿ ಮಾಡಿ ನಾಲ್ಕು ಲಕ್ಷ ಕೋಟಿಗೂ ಮಿಕ್ಕಿ ಹಣ ಸಂಗ್ರಹಿಸಿಟ್ಟಿದೆ. ಹೈಕೋಟರ್್ ಸ್ವಿಸ್ ಬ್ಯಾಂಕ್ನ ಹಣವನ್ನು ವಾಪಸ್ ತರಲು ಪತ್ರ ಬರೆಯಿರಿ ಎಂದು ಹೇಳಿದ್ದರೂ ಕೇಂದ್ರ ಪತ್ರ ಬರೆಯುವುದಿಲ್ಲ. ಯಾಕೆಂದರೆ ಈ ಹಣ ಎಲ್ಲಾ ಕಾಂಗ್ರೆಸ್ ಮುಖಂಡರದ್ದು ಎಂದು ಆರೋಪಿಸಿದ್ದಾರೆ.
ಮಾಳವಿಕ ಅವಿನಾಶ್ ಸಿನಿಮಾ ಡೈಲಾಗ್:
ಬಿಹಾರದ ಹೂಂಕಾರ್ ರ್ಯಾಲಿಯನ್ನು ನೆನಪಿಸಿದ ಮಾಳವಿಕ ಇದು ರಣರಂಗವನ್ನು ನೆನಪಿಸುವ ಘರ್ಜನೆಯಾಗಿದೆ. ಈ ಹೂಂಕಾರ್ಗೆ ದುಷ್ಟರನ್ನು ಸಂಹಾರ ಮಾಡುವ ಶಕ್ತಿ ಹೊಂದಿದೆ. ನಮ್ಮ ದೇಶದಲ್ಲಿ ಹಲವಾರು ದುಷ್ಟರು ಇದ್ದಾರೆ ಇವರೆಲ್ಲಾ ಸಂಹಾರ ನಡೆಯಬೇಕು. ಒಂದು ಮುಕ್ಕಾಲು ಲಕ್ಷ ಕೋಟಿ ಟುಜಿ ಹರಗರಣದಂತೆ ವರ್ಷಕ್ಕೆ ಹತ್ತು ಹಗರಣ ವರ್ಷಕ್ಕೆ ನೂರು ಹಗರಣ ಹಾಗಾದರೆ ಈ ಹಗರಣದ ಮೊತ್ತ ಎಷ್ಟಿರಬಹುದು? ಈ ಬಗ್ಗೆ ಮನಮೋಹನ್ ಸಿಂಗ್ ಮಾತಾಡುವುದಿಲ್ಲ. ಮಹಿಳೆಯರಿಗೆ ಅಸುರಕ್ಷತೆ ಕಾಡುತ್ತದೆ. ಇದಕ್ಕೆ ದೆಹಲಿಯ ಅತ್ಯಾಚಾರ ಪ್ರಕರಣ ಸಾಕ್ಷಿ ಆಗಲೂ ಮನಮೋಹನರದ್ದು ಮೌನ ವೃತ. ಮನಮೋಹನ್ ಸಿಂಗ್ ಮೂಗಿನ ನೇರದಲ್ಲಿ ನಡೆದ ಕೋಲ್ ಹಗರಣ ನಡೆದಿದೆ ಆಗಲೂ ಅವರದ್ದು ಮೌನ ವೃತ. ಆದ್ದರಿಂದ ನಮ್ಮ ದೇಶದ ಪ್ರಧಾನಿ ಮನಮೋಹನ್ ಸಿಂಗ್ ಅಲ್ಲ, ಅವರು ಮೌನ ಮೋಹನ್ ಸಿಂಗ್. ಈ ವ್ಯಕ್ತಿ ದೆಹಲಿಯ ಅತ್ಯಾಚಾರ ಪ್ರಕರಣದಿಂದ ಹಿಡಿದು ಯಾವ ಹಗರಣದ ಬಗ್ಗೆ ಸದಾ ಮೌನ ವೃತ. ಚೀನ ಹದಿನಾಲ್ಕು ಕಿ,ಮೀ ಅತಿಕ್ರಮಿಸಿದರೂ ಸದಾ ಮೌನವೃತದಲ್ಲಿ ಕಾಲಕಳೆಯುವ ಮನಮೋಹನ್ ಸಿಂಗ್ ಸರಕಾರದ ಸಂಹಾರವಾಗಬೇಕು.
ಅದೇ ರೀತಿ ಬಹುಸಂಖ್ಯಾತರನ್ನು ವಂಚಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರದ ದುಷ್ಟತನದ ಸಂಹಾರ ನಡೆಯಬೇಕು. ಈ ಎಲ್ಲಾ ದುಷ್ಟರನ್ನು ಸಂಹರಿಸಲೆಂದೇ ಹೂಂಕಾರ್ ರ್ಯಾಲಿಯ ಮೂಲಕ ರಣರಂಗಕ್ಕೆ ಸಿದ್ಧವಾದ ಮೋದಿಯವರ ಘರ್ಜನೆಗೆ ನಾವೆಲ್ಲಾ ಸಹಕಾರ ನೀಡಬೇಕು ಎಂದು ಮಾಳವಿಕ ಮಾಮರ್ಿಕವಾಗಿ ನುಡಿದರು ಮಾಳವಿಕ/
ಅಮೇರಿಕಾವನ್ನು ಮಟ್ಟ ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ ಮೋದಿ
ಒಂದು ಕಾಲದಲ್ಲಿ ಅಮೇರಿಕಾ ಮೋದಿಗೆ ವೀಸಾ ಕೊಡಲು ನಿರಾಕರಿಸಿತ್ತು. ಆದರೆ ಇದೀಗೆ ಅಮೇರಿಕಾ ಮೋದಿಯವರನ್ನು ಕರೆದು ವೀಸಾ ಕೊಡಲು ನೋಡುತ್ತಿದೆ. ಅಷ್ಟರ ಮಟ್ಟಿಗೆ ಮೋದಿ ಬೆಳೆದಿದ್ದಾರೆ. ಒಬ್ಬ ಸಾಮಾನ್ಯ ಚಾ ಮಾರುವ ಹುಡುಗ ನರೇಂದ್ರ ಮೋದಿ ಗುಜರಾತನ್ನು ಪ್ರಪಂಚದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿಸಿದ್ದಾರೆ. ಆದರೆ ಕಾಂಗ್ರೆಸಿಗರು ಈ ದೇಶವನ್ನೇ ಮಾರಲು ನೋಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಯುವ ಜಾತ್ಯತೀತ ಜನದಳದ ಅಧ್ಯಕ್ಷ ಆನಂದ ದೇವಾಡಿಗ ಹಾಗೂ ಅವರ ಹಿಂಬಾಲಕರು ಎಸ್ ಕೆ ಶೇಖಬ್ಬಾ ಕಾಟಿಪಳ್ಳ, ಅಶೋಕ್ ಸುರತ್ಕಲ್, ನಾಗರಾಜ ಆಚಾರ್ ಎಡಪದವು ಜನಾರ್ದನ ಕೊಟ್ಟಾರಿ, ಯಶವಂತ ಭಂಡಾರಿ ಸೇರಿದಂತೆ ಒಟ್ಟು ಎಂಟು ಮಂದಿ ಮೋದಿ ಮೋಡಿಗೆ ಒಳಗಾಗಿ ಜಾತ್ಯತೀತ ಜನತಾದಳವನ್ನು ಬಿಟ್ಟು ಬಿಜೆಪಿಗೆ ಸೇರಿದರು. ಇವರಿಗೆ ಮೋನಪ್ಪ ಭಂಡಾರಿ ಪಕ್ಷದ ಧ್ವಜ ನೀಡಿ ಪಕ್ಷದ ಮಾನ್ಯತೆಯನ್ನು ನೀಡಿದರು.
ಎರಡೂ ಕಿಡ್ನಿಗಳನ್ನು ಕಳೆದುಕೊಂಡ ರಾಘವೇಂದ್ರ ನಾಯಕ್ ಅವರಿಗೆ ಒಂದು ಲಕ್ಷ ರೂ ಹಣದ ಧನಸಹಾಯ ನೀಡಲಾಯ್ತು. ಅಲ್ಲದೆ ನೆರೆದ ಜನತೆ ಡಬ್ಬಿಗೆ ಹಣ ಸುರಿಯುವ ಮೂಲಕ ಧನಸಹಾಯ ಮಾಡಿದರು.
ಜೀವಂಧರ್ ಕುಮಾರ್ ಹೊಸಮನೆ, ಕಿರುತೆರೆ ನಟಿ=ಬಿಜೆಪಿ ವಕ್ತಾರೆ ಮಾಳವಿಕ ಅವಿನಾಶ್, ನಮೋ ಬ್ರಿಗೆಡ್ನ ಯುವ ತೇಜಸ್ವಿ ಸೂರ್ಯ, ನಳೀನ್ ಕುಮಾರ್ ಕಟೀಲ್, ವಕೀಲ ಪಿ.ಪಿ. ಹೆಗ್ಡೆ, ಮಾಜಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,
ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಉತ್ತರ ವಿಧಾನಸಭಾ ಅಧ್ಯಕ್ಷ ರಮೇಶ್, ವಿಜಯ ಕುಮಾರ್ ಶಿಬ್ರಿಕೆರೆ ಮತ್ತತರು ಉಪಸ್ಥಿತರಿದ್ದರು. ಮುರಳಿಧರ ಶೆಟ್ಟಿ ಸ್ವ್ವಾಗತಿಸಿ ವಿದ್ಯಾ ವಿಜಯ ಗೌಡ ಶಿಬ್ರಿಕೆರೆ ನಿರೂಪಿಸಿದರು










