ಸುದ್ದಿ9 ಕಿಲೆಂಜೂರು ಹೊಸ ಮನೆ ದಿ| ಬಾಬು ಶೆಟ್ಟಿ ಹಾಗೂ ದಿ| ಕಲ್ಯಾಣಿ ಶೆಟ್ಟಿಯ ಸ್ಮರಣಾರ್ಥವಾಗಿ ಅವರ ಮಕ್ಕಳು ಹಾಗೂ ಮರಿ ಮಕ್ಕಳ ಸಹಾಯರ್ಧವಾಗಿ ಅತ್ತೂರು ಮೂಡ್ರಗುತ್ತು ಬಸ್ಸು ತಂಗುದಾಣವನ್ನು ಎ. ಜಯ ಶೆಟ್ಟಿ ಮೂಡ್ರಗುತ್ತು ಶುಕ್ರವಾರ ಲೋಕಾರ್ಪಣೆ ಗೊಳಿಸಿದರು.
ತಂಗುದಾಣದ ಸಮೀಪದ ದೈವದ ಕಟ್ಟೆಯನ್ನು ಅತ್ತೂರು ಶಂಭು ಮುಕಾಲ್ದಿ ಉದ್ಘಾಟಿಸಿದರು.
ಈ ಸಂದರ್ಭ ರಘುನಾಥ ಶೆಟ್ಟಿ ಮೂಡ್ರಗುತ್ತು, ವಿಂಗ್ ಕಮಾಂಡರ್ ಗಣನಾಥ ಶೆಟ್ಟಿ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲವ ಶೆಟ್ಟಿ ಕೆಮ್ರಾಲ್, ಸುದೀರ್ ಶೆಟ್ಟಿ ಮೂಡ್ರಗುತ್ತು, ಎಕ್ಕಾರು ಕಂಬ್ಳಗುತ್ತು ಕರುಣಾಕರ ಶೆಟ್ಟಿ, ಶಿವರಾಮ ಶೆಟ್ಟಿ ಮೂಡ್ರಗುತ್ತು, ತಾ.ಪಂ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕೆಮ್ರಾಲ್ ಪಿ.ಡಿ.ಒ ರಮೇಶ್ ರಾಥೋಡ್, ಕೆಮ್ರಾಲ್ ಪಂಚಾಯಿತಿ ಸದಸ್ಯರಾದ ಸುದಾಕರ ಶೆಟ್ಟಿ, ಕೆ.ಎ.ಖಾದರ್, ಕೆಮ್ರಾಲ್ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಮೂಡ್ರುಗುತ್ತು, ಗುತ್ತಿಗೆದಾರ ನವೀನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


