ಗುವಾಹಟಿ:  ಗುವಾಹಟಿಯಲ್ಲಿ ಗಂಡನಿಂದ ಹತ್ಯೆಗೀಡಾದ ಮಹಿಳೆ ಕಾಂಗ್ರೆಸ್ ಕಾರ್ಯಕರ್ತೆ. ಆದರೆ, ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಆಕೆ ಬಂದಿರಲೇ ಇಲ್ಲವೆಂದು ಪೊಲೀಸ್ ವರಿಷ್ಠಾಧಿಕಾರಿ ಅಮನ್`ಜೀತ್ ಕೌರ್ ಹೇಳಿರುವುದಾಗಿ ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಪ್ರಚಾರ ಕಾರ್ಯಕ್ರಮದ ವೇಳೆ ರಾಹುಲ್ ಗಾಂಧಿಗೆ ಮುತ್ತು ಕೊಟ್ಟ ಮಹಿಳೆಯನ್ನ ಆಕೆಯ ಪತಿಯೇ ಬೆಂಕಿ ಹಚ್ಚಿ ಕೊಂದಿದ್ಧಾನೆ ಎಂದು ಸುದ್ದಿಯಾಗಿದ್ದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.

ಈ ಸುದ್ದಿಗೆ ಇಂಬು ನೀಡುವಂತೆ ಗುವಾಹಟಿಯ ಸ್ಥಳೀಯ ಪತ್ರಿಕೆಯೊಂದು ವರದಿ ಪ್ರಕಟಿಸಿದೆ. `ರಾಹುಲ್ ಗಾಂಧಿ ಸಂವಾದದ ಸಂಪೂರ್ಣ ದೃಶ್ಯಾವಳಿಯನ್ನ ನಾವು ಪರಿಶೀಲಿಸಿದ್ದೇವೆ. ಮೃತಪಟ್ಟಿರುವ ಮಹಿಳೆ ರಾಹುಲ್ ಗಾಂಧಿ ಸಮೀಪದಲ್ಲಿ ಎಲ್ಲೂ ಇರಲಿಲ್ಲ’ ಎಂದು ಸ್ಥಳೀಯ ಪೊಲೀಸರು ತಿಳಿಸಿರುವುದಾಗಿ ಹೇಳಿದೆ.

 

rahul1

ಒಟ್ಟಿನಲ್ಲಿ, ರಾಹುಲ್ ಗಾಂಧಿಯ ಮುತ್ತಿನ ಪ್ರಕರಣ ಸಂಪೂರ್ಣ ಅಯೋಮಯವಾಗಿದೆ. ಕಾಕತಾಳೀಯವೆಂಬಂತೆ ನಡೆದ ಮಹಿಳೆಯ ಹತ್ಯೆ ರಾಹುಲ್ ಗಾಂಧಿಗೆ ಹೆಸರಿಗೆ ಥಳಕು ಹಾಕಿಕೊಂಡಿದೆಯಾ..? ಎಂಬ ಅನುಮಾನ ಸಹ ಇಲ್ಲದಿಲ್ಲ. ತನಿಖೆ ಬಳಿಕ ಎಲ್ಲ ಅನುಮಾನಗಳಿಗೆ ತೆರೆಬೀಳಲಿದೆ.

By Suddi9 Author

Suddi9

Leave a Reply

Your email address will not be published. Required fields are marked *