ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 2ರಂದು ಆದಿತ್ಯವಾರ ಚಂಡಿಕಾ ಯಾಗವು ನಡೆಯಲಿರುವುದಾಗಿ ಒಡ್ಡೂರು ಫಾರ್ಮ್ಸ್ ನ ಶ್ರೀಮತಿ ಮತ್ತು ಶ್ರೀ ರಾಜೇಶ್ ಉಳಿಪ್ಪಾಡಿ ತಿಳಿಸಿದ್ದಾರೆ. ಆ ಪ್ರಯುಕ್ತ ಮಾರ್ಚ್ 2ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಚಂಡಿಕಾ ಯಾಗ ಆರಂಭವಾಗುವುದು. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನೀಡಿ 12.30ಕ್ಕೆ ಮಹಾಪೂಜೆ ನಡೆಯಲಿರುವುದು. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು. ಭಕ್ತಾದಿಗಳು ಸಕುಟುಂಬಿಕರಾಗಿ ಆಗಮಿಸಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ತಾಯಿ ರಾಜರಾಜೇಶ್ವರಿಯ ಕೃಪೆಗೆ ಪಾತ್ರರಾಗಕೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

