ಸುದ್ದಿ9 ವಿಶ್ಲೇಷನೆ: ಬಿಜೆಪಿಗೆ ಮೋದಿ ಮೇಲೆ ಧೈರ್ಯ; ಕಾಂಗ್ರೆಸ್ಗೆ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣು ಒಟ್ಟಿನಲ್ಲಿ ದ.ಕ. ಲೋಕಸಭಾ ಕ್ಷೇತ್ರ ಅಷ್ಟು ಸುಲಭವಿಲ್ಲ ಕಣಣ್ಣಾ… ಹೌದು, ಈ ಬಾರಿಯ ಲೋಕಸಭಾ ಚುನಾವಣೆ ತೀರಾ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಗೆ ಮೋದಿ ಎಫೆಕ್ಟ್ ಹಾಗೂ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಣರ್ಾಯಕ ಪಾತ್ರವನ್ನು ವಹಿಸಬಹುದು ಎಂದು ಕೆಲವು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಈಗಾಗಲೇ ಬಿಜೆಪಿಯ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಇಲ್ಲಿನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ನಳಿನ್ ಕುಮಾರ್ ಕಟೀಲ್ ಎಂದು ಹೇಳಿಕೊಂಡಿದ್ದು, ಪಕ್ಷದಲ್ಲಿ ಅಭ್ಯಥರ್ಿ ಬಗ್ಗೆ ಯಾವುದೇ ಗೊಂದಲವಿಲ್ಲ. ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಗುವುದೊಂದೇ ಬಾಕಿಯಿದ್ದು, ಬಿಜೆಪಿ ವರಿಷ್ಠರು ಇನ್ನೂ ಕೂಡಾ ಯಾರು ಅಭ್ಯಥರ್ಿ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಲಿಲ್ಲ. ಆದುದರಿಂದ ಬಿಜೆಪಿ ಅಭ್ಯಥರ್ಿಯ ಬಗ್ಗೆ ಕುತೂಹಲ ಇನ್ನೂ ಹಾಗೆಯೇ ಇದೆ.
ಈ ನಡುವೆ ನಳಿನ್ ಕುಮಾರ್ ಕಟೀಲ್ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವತ್ತ ಮನಸ್ಸು ಮಾಡಬೇಕು ಎಂಬುದು ಕಾರ್ಯಕರ್ತರ ಆಸೆಯಾಗಿದೆ. ಯಾಕೆಂದರೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕರಾವಳಿಯ ಸೋಲಿನ ರುಚಿಯನ್ನುಂಡಿತ್ತು.

 

nalin-kumar

harsha-moily

poojari

ಈ ಕ್ಷೇತ್ರದ 35 ಶೇ. ಮತ ಅಲ್ಪಸಂಖ್ಯಾತರದ್ದು:

ಈ ಕ್ಷೇತ್ರದ ಶೇ 35 ಶೇ. ಮತ ಅಲ್ಪಸಂಖ್ಯಾತರದ್ದಾಗಿದೆ. ಇದೆಲ್ಲಾ ಮೇಲ್ನೋಟಕ್ಕೆ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು. ಕಾಂಗ್ರೆಸ್ ಈ ಸಾಂಪ್ರದಾಯಿಕ ಮತಗಳ ಮೇಲೆಯೇ ಕಣ್ಣಿಟ್ಟಿದೆ. ಅಲ್ಲದೆ ಬಹುಸಂಖ್ಯಾತರ ಪೈಕಿ ಹಲವಾರು ಜಾತಿ ಜನಾಂಗದ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ಹಂಚಿಹೋಗುವುದರಿಂದ ಗೆಲುವು ಯಾರಿಗೆ ಎಂದು ಅಷ್ಟು ಸುಲಭವಾಗಿ ಹೇಳುವಂತಿಲ್ಲ. ಸಾಂಪ್ರದಾಯಿಕ ಮತಗಳ ಹೊರತಾಗಿಯೂ ಉಳಿದ ಮತಗಳನ್ನು ಬಿಜೆಪಿ ತನ್ನತ್ತ ಸೆಳೆಯುವ ಕಾರ್ಯವನ್ನು ಮಾಡುವುದು ಬಿಜೆಪಿಗೆ ಅವಶ್ಯಕತೆಯಾಗಿದೆ. ಇಲ್ಲಿ ಮೋದಿ ಎಫೆಕ್ಟ್ ಕೂಡಾ ಕೆಲಸ ಮಾಡುವ ಸಾಧ್ಯತೆ ಇದೆ.
ಅಲ್ಲದೆ ಈ ಬಾರಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರಿಕೊಂಡ ಯುವಜನತೆ ಮೋದಿ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದು ಇದೆಲ್ಲಾ ಬಿಜೆಪಿಗೆ ಪ್ಲಸ್ ಆಗುವ ಸಾಧ್ಯತೆ ಇದೆ.

ಮೊನ್ನೆ ಕೇಂದ್ರ ಮೈದಾನದಲ್ಲಿ ಮೋದಿಯವರ `ಭಾರತ ಗೆಲ್ಲಿಸಿ’ ಸಮಾವೇಶಕ್ಕೆ ಒಂದೂವರೆ ಲಕ್ಷ ಜನ ಸೇರಿದ್ದರೂ ಬಿಜೆಪಿ ಈ ಬಗ್ಗೆ ಮೈಮರೆತರೆ ತುಂಬಾ ಅಪಾಯವಿದೆ. ಲೋಕಸಭಾ ಅಭ್ಯಥರ್ಿ ಎನ್ನಲಾದ ನಳಿನ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಬಿಜೆಪಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಮುಖಂಡರು, ಕಾರ್ಯಕರ್ತರನ್ನು ಪ್ರೀತಿಯಿಂದ ನೋಡಿಕೊಂಡರೆ ಅವರು ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದು. ಅಲ್ಲದೆ ಮೋದಿಯನ್ನು ಪ್ರಧಾನಿಯನ್ನಾಗಿ ಗದ್ದಿಗೆಯಲ್ಲಿ ಕೂರಿಸಬೇಕಾದರೆ ಬಿಜೆಪಿ ಮುಖಂಡರು ತನ್ನೆಲ್ಲಾ ಆಂತರಿಕ ಕಚ್ಚಾಟವನ್ನು ಬಿಡಬೇಕಾದ ಅವಶ್ಯಕತೆ ಖಂಡಿತಾ ಇದೆ.

ಕಾಂಗ್ರೆಸ್ ಆಂತರಿಕೆ ಚುನಾವಣೆ ಎಫೆಕ್ಟ್:

ಈ ಬಾರಿ ಕಾಂಗ್ರೆಸ್ ಟಿಕೆಟ್ ಆಂಕಾಕ್ಷಿಗಳಾಗಿ ಮೂರು ಜನ ಸ್ಪಧರ್ೆಗಿಳಿದಿದ್ದಾರೆ. ಅದರಲ್ಲಿ ಜನಾರ್ದನ ಪೂಜಾರಿ, ಹರ್ಷ ಮೊಯಿಲಿ ಹಾಗೂ ಅಲ್ಪಸಂಖ್ಯಾತ ಅಭ್ಯಥರ್ಿ ಯು.ಕೆ. ಕಣಚೂರು ಮೋನು. ಆಂತರಿಕ ಚುನಾವಣೆಯಲ್ಲಿ ಮೂರು ಮಂದಿ ಸ್ಪಧರ್ಿಸುವುದರಿಂದ ಯಾರು ಗೆಲ್ಲಬಹುದು ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಇದರಲ್ಲಿ ಸ್ಪಷ್ಟವಾಗಿ ಕಾಣುವ ಅಂಶವೇನೆಂದರೆ ಕಾಂಗ್ರೆಸ್ ಕೂಡಾ ಬಿಜೆಪಿಯವರಿಗಿಂತ ಜಾಸ್ತಿ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ.
ಕಾಂಗ್ರೆಸ್ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದುಕೊಂಡಿರುವುದರಿಂದ ಈ ಬಾರಿಯೂ ಖಂಡಿತಾ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಕೂತಿದೆ. ಇವರು ಅಲ್ಪಸಂಖ್ಯಾತರ ಶೇ.35 ಮತ್ತು ಬಹುಸಂಖ್ಯಾತರ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿದೆ. ಆದುದರಿಂದ ಜನರು ಕಾಂಗ್ರೆಸ್ ಪಕ್ಷದ ಅಭ್ಯಥರ್ಿಗಳನ್ನು ನೋಡುವ ಬದಲು ಕಾಂಗ್ರೆಸ್ ಪಕ್ಷವನ್ನು ನೋಡಿ ಮತ ಹಾಕುತ್ತಾರೆ. ಇದೇ ಕಾರಣದಿಂದ ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬಹುದು ಎಂದು ವಿಶ್ವಾಸದಿಂದ ಬೀಗುತ್ತಿದೆ.

ಕಾಂಗ್ರೆಸ್ನ ಆಂತರಿಕ ಚುನಾವಣೆ ಪಕ್ಷದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಕೊನೆಘಳಿಗೆಯಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರು ತಮ್ಮ ಪುತ್ರನಾದ ಹರ್ಷ ಮೊಯಿಲಿಯನ್ನು ಛೂಬಿಟ್ಟಿರುವುದರಿಂದ ಕಾಂಗ್ರೆಸ್ ವರಿಷ್ಠರು ಆಂತರಿಕ ಚುನಾವಣೆಗೆ ಮನಸ್ಸು ಮಾಡಿದೆ. ಒಂದು ವೇಳೆ ಹರ್ಷ ಮೊಯಿಲಿಯವರು ಆಂತರಿಕ ಚುನಾವಣೆಯಲ್ಲಿ ಗೆದ್ದು ಬಂದರೂ ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳು ಖಂಡಿತಾ ಕಾಂಗ್ರೆಸ್ಗೆ ಕಟ್ಟಿಟ್ಟ ಬುತ್ತಿ. ಹರ್ಷ ಮೊಯಿಲಿಯವರು ಈ ಬಾರಿ ಎತ್ತಿನ ಹೊಳೆ-ನೇತ್ರಾವತಿ ಯೋಜನೆಯ ಪರವಾಗಿ ಮಾತಾಡಿರುವುದರಿಂದ ಸಹಜವಾಗಿಯೇ ಜಿಲ್ಲೆಯ ಜನರು ಮುನಿಸಿಕೊಂಡಿರುವ ಸಾಧ್ಯತೆ ಇದೆ.

ಆದುದರಿಂದ ಯಾರು ಏನೇ ಅನ್ನಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಹನಾಹಣಿ ಸೃಷ್ಟಿಯಾಗಲಿದೆ.
-ಬ್ರಹ್ಮ

By Suddi9 Author

Suddi9

Leave a Reply

Your email address will not be published. Required fields are marked *