ಬಂಟ್ವಾಳ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಪಂಚಾಯತ್ ವ್ಯಾಪ್ತಿಯ ಪೊಳಲಿ ಪುಂಚಮೆಯಿಂದ ಕಲ್ಕುಟ,ದೇವರ ಗುಡ್ಡೆ ಮಾರ್ಗವಾಗಿ ಅಖಿಲೇಶ್ವರ ದೇವಸ್ಥಾನದವರೆಗಿನ 3 ಕಿ.ಮೀ.ಉದ್ದದ ರಸ್ತೆಯನ್ನು ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಗ್ರಾಮಸ್ಥರು ಡಿ21ರಂದು ಭಾನುವಾರ ಶ್ರಮದಾನದ ಮೂಲಕ ದುರಸ್ತಿ ಪಡಿಸಲಾಯಿತು.

ಪೊಳಲಿ ರಾಜರಾಜೇಶ್ವರೀ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿ 1930ರಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ಆ ಬಳಿಕ 1964ರಲ್ಲಿ ರಸ್ತೆಯನ್ನು ದುರಸ್ತಿ ಪಡಿಸಿ ಹೊಸ ಸೇತುವೆಯನ್ನು ನಿರ್ಮಿಸಿ ವಾಹನ ಸಂಚಾರಕ್ಕೆ ಅನುಕೂಲವಾಗುವಷ್ಟು ಅಗಲದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಿಸಿರುವುದರಿಂದ ಪ್ರಸ್ತುತ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಪದ್ಮನಾಭ ಕೊಟ್ಟಾರಿಯವರು ಶಾಸಕರಾಗಿದ್ದ ಕಾಲದಲ್ಲಿ ರಸ್ತೆ ಡಾಮಾರೀಕರಣಗೊಂಡಿದ್ದು ಇದೀಗ ಮತ್ತೆ ರಸ್ತೆ ಹಾನೀಗೀಡಾಗಿದೆ. ರಸ್ತೆ ದುರಸ್ತಿ ಪಡಿಸಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಸ್ಥಳೀಯ ಪಂಚಾಯತ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಮೊದಲು ಸ್ಥಳೀಯ ಗುತ್ತಿಗೆದಾರರೊಬ್ಬರು ವಿಜಯಶ್ರೀ ಮಿತ್ರವ್ರಂದದೋಂದಿಗೆ ಮಣ್ಣುಹಾಕಿ ಸರಿಪಡಿಸಲಾದರು ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿತ್ತು. ರಸ್ತೆಯು ಸಂಪೂರ್ಣ ಹದಗೆಟ್ಟು ಹೊಂಡಮಯವಾಗಿ ಮಾರ್ಪಟ್ಟು ವಾಹನ ದ್ವಿಚಕ್ರವಾಹನಗಳು ಸಂಚರಿಸಲು ಸಾದ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮರು ದುರಸ್ಥಿಗೆ ರಾಜೇಶ್ ನಾಯಕ್ ಸ್ಪಂದಿಸಿ ಹೊಂಡಗಳಿಂದ ತುಂಬಿದ ರಸ್ತೆಯನ್ನು ಸಂಪೂರ್ಣ ಸರಿಪಡಿಸಲಾಯಿತು. ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನಲೆಯಲ್ಲಿ ಗ್ರಾಮಸ್ಥರೇ ಪ್ರತಿಭಟನಾರ್ಥಕವಾಗಿ ಶ್ರಮದಾನ ನಡೆಸಿದ್ದು ಇನ್ನೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವವುದಾಗಿ ಎಚ್ಚರಿಸಿದ್ದಾರೆ. ಜ. 2ರಂದು ಸ್ಥಳೀಯ ಅಖೀಲೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಭಕ್ತಾದಿಗಳ ಅನುಕೂಲದ ದೃಷ್ಟಿಯಿಂದ ಸುಮಾರು 2 ಕಿ.ಮೀ ಉದ್ದದ ರಸ್ತೆಯನ್ನು ಕೆಂಪು ಕ್ಲಲು ಹಾಗೂ ಮಣ್ಣು ಹಾಕಿ ಸಮತಟ್ಟುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ರಾವ್, ಯಶವಂತ ಪೊಳಲಿ, ಯಶೋಧರ ಕಲ್ಕುಟ, ಶಂಕರ್ ಕೊಳದದಬೈಲು ಪಂಚಾಯತ್ ಸದಸ್ಯರಾದ ವಾಮನ ತೋಡಬಲಿ, ವಿಶ್ವನಾಥ, ದಾಮೋಧರ, ರಾಜು ಮತ್ತಿತರರು ಉಪಸ್ಥಿತರಿದ್ದರು . ವಿಜಯಶ್ರೀ ಮಿತ್ರವೃಂದ ಹಾಗೂ ರಾಜಶ್ರೀ ಯುವಕವೃಂದದ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.





