ಬಂಟ್ವಾಳ: ವಟಪುರ ಕ್ಷೇತ್ರ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ಶ್ರಾವಣ ಮಾಸದ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿತು. ಸೇವೆಯ ನಿಮಿತ್ತ ವಾರ್ಷಿಕೋತ್ಸವ, ಸನ್ಮಾನ ಕಾರ್ಯಕ್ರಮ ನಡೆಯಿತು.

ಹಿರಿಯ ಹಿಮ್ಮೇಳ ವಾದಕ ಲಕ್ಷ್ಮೀಶ ಅಮ್ಮಣ್ಣಾಯ ಮತ್ತು ಹವ್ಯಾಸಿ ಅರ್ಥಧಾರಿ, ಕಲಾಪೋಷಕ, ಸಂಘಟಕ ಭಾಸ್ಕರ ರಾವ್ ಕಾರಾಜೆ ಅವರನ್ನು ಸನ್ಮಾನಿಸಲಾಯಿತು.
ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿದ್ದ ಶ್ರೀ ದೇವಳದ ಮೊಕ್ತೇಸರರಾದ ಬಿ.ಸುರೇಶ್ ಬಾಳಿಗಾ ಯಕ್ಷಗಾನ ತಾಳಮದ್ದಳೆ ಸೇವೆ ಕುರಿತು ಮಾತನಾಡಿ, ಯಕ್ಷಗಾನ ಪದ ಬಳಕೆ ಬರುವ ವಿಚಾರದಲ್ಲಿ ಸೂಕ್ಷ್ಮತೆ ಅಡಗಿದೆ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ಸೇವೆಯ ಯಶಸ್ಸಿಗೆ ಸಹಕರಿಸಿದ ತಂಡಗಳಿಗೆ ಕೃತಜ್ಞತೆ ಸಲ್ಲಿಸಿ, ಯುವ ಪೀಳಿಗೆಗೆ ಇದರ ಮಹತ್ವ ಮತ್ತಷ್ಟು ಅರಿವಾಗಬೇಕು ಎಂದರು. ದೇವಳದ ಮೊಕ್ತೇಸರ ಭಾಮಿ ನಾಗೇಂದ್ರನಾಥ ಶೆಣೈ ಉಪಸ್ಥಿತರಿದ್ದರು.
ಅಧ್ಯಾಪಕ ಮುರಳೀಧರ ಕರೆಂಕಿ ಸ್ವಾಗತಿಸಿದರು. ನಾಗೇಂದ್ರ ಪೈ ವಾರ್ಷಿಕ ವರದಿ ವಾಚಿಸಿದರು. ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಸಂಚಯಗಿರಿ ಕಾರ್ಯಕ್ರಮ ನಿರ್ವಹಿಸಿದರು. ಸೀತಾರಾಮ ಭಾಗವತ ಮತ್ತು ವಾಮನ ಪಾಣೆಮಂಗಳೂರು ಸನ್ಮಾನಪತ್ರ ವಾಚಿಸಿದರು.
ತೆರೆಮರೆಯ ಕಲಾವಿದರನ್ನು ಗುರುತಿಸಿ, ಗೌರವಿಸುವುದು ಬಹಳ ಶ್ರೇಷ್ಟವಾದುದು ಎಂದು ಸನ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.
