ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ  ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯು ನಡೆಯಿತು.ಮುಖ್ಯ ಅತಿಥಿಯಾಗಿ  ಭಾಗವಹಿಸಿದ್ದ ಕಾಕುಂಜೆ ಸಾಫ್ಟ್ ವೇರ್ ಕಂಪೆನಿ ಪ್ರೈ.ಲಿ. ನ ಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ  ಗೋಪಾಲಕೃಷ್ಣ ಭಟ್ ಕಾಕುಂಜೆ ಮಾತನಾಡಿ “ಆಟಿಸಂ ನಂತಹ ಸಂಕೀರ್ಣವಾದ ದಿವ್ಯಾಂಗತೆಯುಳ್ಳ ವ್ಯಕ್ತಿಗಳಿಗೆ ಏಐಯನ್ನು ಬಳಸಿ ರೋಬೋಟ್ ಗಳ ಮೂಲಕ  ಥೆರಪಿಗಳನ್ನು ಕೊಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿಕಾಸಂ ಸೇವಾ ಫೌಂಡೇಶನ್ ಜೊತೆಗೆ ಸಹಭಾಗಿತ್ವದಲ್ಲಿ ಈ ಸಂಶೋಧನೆಗಳನ್ನು ಮುಂದುವರಿಸುವ ಚಿಂತನೆ ಇದೆ ಎಂದು ಹೇಳಿದರು.


ಇನ್ನೋರ್ವ ಅತಿಥಿ ರೊ.ನಾರಾಯಣ ಪೆರ್ನೆ ಮಾತನಾಡಿ  ವಿಕಾಸಂ ಸಂಸ್ಥೆಯ ಶಿಕ್ಷಕರು  ದಿವ್ಯಾಂಗರಿಗೆ ಸಲ್ಲಿಸುತ್ತಿದ್ದ ಸೇವೆಯನ್ನು ಶ್ಲಾಘಿಸಿದರು.ಶಿಕ್ಷಣ ಇಲಾಖೆಯ ಬಿ ಆರ್ ಟಿ  ಸುರೇಖಾ ” ಇಂದಿನ ಮೊಬೈಲ್ ಯುಗದಲ್ಲಿ ದಿವ್ಯಾಂಗರು ಮಾತ್ರವಲ್ಲದೆ ಸಾಮಾನ್ಯ ಮಕ್ಕಳ  ವರ್ತನೆಯನ್ನು ತಿದ್ದಲು ಆಕ್ಯುಪೇಶನ್ ಥೆರಪಿಯ ಅವಶ್ಯಕತೆ ಇದೆ” ಎಂದು ಹೇಳಿದರು.


ಪತ್ರಕರ್ತ ಹರೀಶ್  ಮಾಂಬಾಡಿ” ದಿವ್ಯಾಂಗ ಮಕ್ಕಳು ವಿಶೇಷ ಶಿಕ್ಷಕರ ಜೊತೆಗೆ ಆಪ್ತ ಭಾವವನ್ನು ಹೊಂದಿರುತ್ತಾರೆ ಇಂತಹ ಆಪ್ತ ಭಾವವನ್ನು ಮೂಡಿಸುವ,  ಉಳಿಸಿಕೊಳ್ಳುವ ವಿಶೇಷ ಶಿಕ್ಷಕರ ಕೆಲಸ ಅತ್ಯಂತ ಪವಿತ್ರವಾದದ್ದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕಾಸಂ ಸೇವಾ ಫೌಂಡೇಶನ್ ನ ಸಹ ಸಂಸ್ಥಾಪಕರಾದ ಗೋಪಾಲ್ ಗೋವಿಂತೋಟ ವಹಿಸದ್ದರು.


ಈ ಸಂದರ್ಭದಲ್ಲಿ ವಿಕಾಸಂ ಸೇವಾ ಫೌಂಡೇಶನ್ ನಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಶಿಕ್ಷಕಿ  ರೇಣುಕಾ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಇತರ ಎಲ್ಲಾ ವಿಶೇಷ ಶಿಕ್ಷಕರನ್ನು ಸ್ಮರಣಿಕೆಯನ್ನಿತ್ರು ಗೌರವಿಸಲಾಯಿತು.

ಫೌಂಡೇಶನ್ ನ ಗಣೇಶ್ ಭಟ್ ವಿ ಸ್ವಾಗತಿಸಿದರು.ವಿದ್ಯಾರ್ಥಿ ಮೊಹಮ್ಮದ್ ಅಲಿ ವಂದಿಸಿದರು. ವಿದ್ಯಾರ್ಥಿ ವಿತೇಶ್ ಕಾರ್ಯಕ್ರಮ ನಿರೂಪಿಸಿದರು.  ಸಂಸ್ಥೆಯ ಹಿರಿಯ ವಾಕ್ ಶ್ರವಣ ತಜ್ಞರಾದ  ಶೀಲಾ ತಿಲಕ್    ” ದಿವ್ಯಾಂಗ ಮಕ್ಕಳಲ್ಲಿ ಸಂವಹನಾ ಕೌಶಲ್ಯವನ್ನು ಸುಧಾರಿಸುವ ತಂತ್ರಗಳ” ಬಗ್ಗೆ ಮಾಹಿತಿ ನೀಡಿದರು. 

By Suddi9

Leave a Reply

Your email address will not be published. Required fields are marked *