ಬಂಟ್ಚಾಳ: ಉದಯಗಿರಿ ಕುದ್ದುಪದವು ಸರಕಾರಿ ಹಿ.ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ ಕೊಡುಗೆಯಾಗಿ ಪ್ರಿಂಟರ್ ರನ್ನು ಹಸ್ತಾಂತರಿಸಲಾಯಿತು. ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಜಲಜಾಕ್ಷಿ ಎಂ.ಇ ರವರ ಅಧ್ಯಕ್ಷತೆ ವಹಿಸಿದ್ದರು.

ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಕಾಪ್ಟನ್ ದಾಸಪ್ಪ ಪೂಜಾರಿಯವರು ಪ್ರಿಂಟರ್ ಹಸ್ತಾಂತರಿಸಿ, ಮಾತನಾಡಿದರು.ರೋಟರಿ ಸಂಸ್ಥೆ ಮೂಲಕ ಈ ಕೊಡುಗೆ ನೀಡಿದ ರೊ. ದಿನೇಶ್ ಕುಮಾರ್,ರೊ.ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಈ ಶಾಲೆಯಿಂದ ಹಿರಿಯ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ ರೇವತಿ. ಬಿ. ಯವರನ್ನು ಶಾಲೆ ಮತ್ತು ದಿವ್ಯಶಕ್ತಿ ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕಿಯವರು ತನ್ನ ಸೇವಾವಧಿಯಲ್ಲಿ ಕಾರ್ಯನಿರ್ವಹಿಸಿದ ಎಸ್.ಡಿ.ಎಮ್.ಸಿ. ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಗೌರವಿಸಿದರು. ಹಾಗೂ ಶಾಲಾ ಶಿಕ್ಷಕಿಯರಿಗೆ ಮತ್ತು ಅಡುಗೆ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವಸಂತ ಶೆಟ್ಟಿ,ಮಹಾಲಿಂಗ ಪಾಟಾಳಿ, ಗುರುವಪ್ಪ ನಾಯ್ಕ್, ಸತೀಶ್ ಪಾಟಾಳಿ,ಅಬ್ದುಲ್ ಕೆರೀಮ್, ಮತ್ತು ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಪೋಷಕರು ,ಮಕ್ಕಳು ಇದ್ದರು. ಮುಖ್ಯ ಶಿಕ್ಷಕಿ ರೇವತಿ.ಬಿ.ಸ್ವಾಗತಿಸಿ, ರೋಟರಿ ಕಾರ್ಯದರ್ಶಿ ರೊ ಕ್ಲಿಫರ್ಡ್ ವೇಗಸ್ ವಂದಿಸಿದರು. ಸುಜಾತ.ಪಿ ಮತ್ತು ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ.ಕೆ ಮತ್ತು ದೀಪಾ ನಾಯಕ್ ಸಹಕರಿಸಿದರು.
