ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಅಶ್ರಯದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿದೇವಸ್ಥಾನದ ವಠಾರದಲ್ಲಿ ನಾಲ್ಕು ದಿನಗಳ ಪೂಜಿಸಲ್ಪಟ್ಟ   47 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವಕ್ಕೆ ಗುರುವಾರ ಸಂಜೆ ಸಂಭ್ರಮದ ತೆರೆ ಬಿತ್ತು.
ಪ್ರತಿಷ್ಠಾಪನಾ ಸ್ಥಳದಿಂದ ಹೊರಟ ಶ್ರೀಗಣೇಶನ ಅದ್ದೂರಿಯ ಶೋಭಾಯಾತ್ರೆ ರಾ.ಹೆ.ಯ ರಾಜಾ ರಸ್ತೆಯಲ್ಲಿ ತಲಪಾಡಿ ಸಮೀಪದ ಗಣೇಶಕಟ್ಟೆಯವರೆಗೆ ತೆರಳಿ ಅಲ್ಲಿಂದ ಅದೇ ದಾರಿಯಾಗಿ ವಾಪಸ್ ಬಂದು ಮಯ್ಯರಬೈಲು,ಭಂಡಾರಿಬೆಟ್ಟು  ನೆರೆ ವಿಮೋಚನಾ ರಸ್ತೆಯಲ್ಲಿ ಸಾಗಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಳದ ಮುಂಭಾಗದಲ್ಲಿ ಹರಿಯುವ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ಹುಲಿ ವೇಷಗಳ ಅಬ್ಬರ,ವಿವಿಧ ಸಂಘ ಸಂಸ್ಥೆಗಳ ಒಂದಕ್ಕೊಂದು ಅದ್ಬುತವಾದ ಸ್ತಬ್ದಚಿತ್ರ, ಟ್ಯಾಬ್ಲೋ,ಚಿಲಿಪಿಲಿಗೊಂಬೆ ,ಕೀಲುಕುದುರೆ ಕುಣಿತ, ಚೆಂಡೆವಾದನ,ಕುಣಿತ ಭಜನೆ, ವಾದ್ಯಗೋಷ್ಠಿ, ಸುಡುಮದ್ದುಗಳ ಪ್ರದರ್ಶನ  ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು.ರಸ್ತೆಯುದ್ದಕ್ಕು ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಭಗವದ್ಬಕ್ತರು ನೆರೆದಿದ್ದು,ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.
ಶೇಂಗಾ ಚಿಕ್ಕಿ ಮಾಲೆ:
ಶ್ರೀ ರಾಮ ಗೆಳೆಯರ ಬಳಗ ಕೈಕಂಬ,ಬಿ .ಸಿ.ರೋಡ್ ಇವರ  ವತಿಯಿಂದ ಶ್ರೀ ಗಣೇಶನಿಗೆ ಬೃಹತ್ ಗಾತ್ರದ  *ಶೇಂಗಾ ಚಿಕ್ಕಿ* ಹಾರವನ್ನು ಅರ್ಪಿಸಿದರು. ಗೆಳೆಯರ ಬಳಗದ ಅಧ್ಯಕ್ಷರಾದ ಸದಾಶಿವ ಕೈಕಂಬ ಇವರ ನೇತೃತ್ವದಲ್ಲಿ ತೆರೆದ ವಾಹನದಲ್ಲಿ ಶೇಂಗಾ ಚಿಕ್ಕಿ ಮಾಲೆಯನ್ನು
ಕೈಕಂಬ ಪೊಳಲಿ ದ್ವಾರದಿಂದ ಮೆರವಣಿಗೆಯಲ್ಲಿ ತಂದು ಶ್ರೀಗಣೇಶನಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಹಾಗೂ ಸಂಘದ ಸರ್ವ ಸದಸ್ಯರು,
ಗಣೇಶೋತ್ಸವ,ರಕ್ತೇಶ್ವರೀ ದೇವಿ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು,ಸದಸ್ಯರು,ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *