ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ವಲಯದ ಸದಸ್ಯ ರ ನಡೆದ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟವನ್ನು ಬೆಂಜನಪದವು ಶ್ರೀ ಕೃಷ್ಣ ಸೇವಾ ಸಮಿತಿ ಯ ಅಧ್ಯಕ್ಷ ರಾದ ಸನತ್ ರವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂಧರ್ಭ ದಲ್ಲಿ ವಲಯದ ಅಧ್ಯಕ್ಷ ರಾದ ರಾಜೇಂದ್ರ ಕೆ., ಉದ್ಯಮಿ ಉಮೇಶ್ ಸಾಲ್ಯಾನ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ ಏನ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್,ಗೌರವಾಧ್ಯಕ್ಷರಾದ ಕಿಶೋರ್,ಪ್ರ ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾಜ್ ರಾವ್, ವಲಯದ ಕ್ರೀಡಾ ಕಾರ್ಯದರ್ಶಿ ಗಳಾದ ಮೋಹನ್, ವಿವೇಕ್ ಉಪಸ್ಥಿತರಿದ್ದರು.
ಕ್ರೀಡಾ ಕಾರ್ಯದರ್ಶಿ ಮೋಹನ್ ಸ್ವಾಗತಿಸಿ, ರವಿ ಪ್ರಕಾಶ್ ಹಾಗೂ ಕೃಷ್ಣ ರಾಜ್ ರಾವ್ ರವರು ವಂದಿಸಿದರು. ದಯಾನಂದ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟ ದಲ್ಲಿ ವಿಜೇತರಾದ ತಂಡ ಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.
