ಬಂಟ್ವಾಳ: ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ (ರಿ) ನಡೆಸುತ್ತಿರುವ ತುಂಬೆ ಪದವಿ ಪೂರ್ವ ಕಾಲೇಜಿನ ವತಿಯಿಂದ ಅಂತರ್ ತರಗತಿ ಮಟ್ಟದ ಪ್ರತಿಭಾ ಸ್ಪರ್ಧೆ ಹಾಗೂ ಸಂಪ್ರದಾಯ ದಿನದ ಸಂಭ್ರಮವು  ಕಾಲೇಜಿನ ಶಬನಾ ಸಭಾಂಗಣದಲ್ಲಿ  ನಡೆಯಿತು.

ಕಾಲೇಜಿನ ಪ್ರಾಚಾರ್ಯರಾದ ದಿನೇಶ ಶೆಟ್ಟಿ ಅಳಿಕೆ ಅವರು ಹೂವಿನ ಕುಂಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಹೊರತಂದು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಇಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ತೀರ್ಪುಗಾರರಾಗಿ ಆಗಮಿಸಿದ್ದ ತುಂಬೆ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಪದ್ಮನಾಭ ಉಪಾಧ್ಯಾಯ ಮಾತನಾಡಿ,  ಸ್ಪರ್ಧೆಯಲ್ಲಿ ಗೆಲುವು-ಸೋಲಿಗಿಂತಲೂ ಭಾಗವಹಿಸುವ ಮನೋಭಾವ ಹಾಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆತ್ಮವಿಶ್ವಾಸ ಮುಖ್ಯವಾಗಿದೆ ಎಂದು ಹೇಳಿದರು.


ಇನ್ನೋರ್ವ ತೀರ್ಪುಗಾರರಾದ ತುಂಬೆ ಪ್ರೌಢಶಾಲೆಯ ಸಹ ಶಿಕ್ಷಕಿ ಅಮೃತಾ, ತುಂಬೆ ಪದವಿ ಪೂರ್ವ ಕಾಲೇಜಿನ  ಉಪನ್ಯಾಸಕಿ  ಕವಿತಾ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ. ನಾಯಕ್,  ಉಪನ್ಯಾಸಕ ಚಂದ್ರಶೇಖರ ಶೆಟ್ಟಿ, ಕಾಲೇಜಿನ ವಿದ್ಯಾರ್ಥಿ ಮಂತ್ರಿಪರಿಷತ್ತಿನ ಅಧ್ಯಕ್ಷ ಮೊಹಮ್ಮದ್ ನಿಹಾದ್ , ಕಾರ್ಯದರ್ಶಿ ಫಾತಿಮತುಲ್ ಅಲೀಮತ್ ಸನಾಮ ಮತ್ತು ವಿರೋಧ ಪಕ್ಷದ ನಾಯಕ ಮೊಹಮ್ಮದ್ ಅಮೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಪನ್ಯಾಸಕರಾದ ಡಿ.ಬಿ. ಅಬ್ದುಲ್ ರಹಿಮಾನ್ ಸ್ವಾಗತಿಸಿ , ಶರತ್ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಅಂತರ್ ತರಗತಿ ಮಟ್ಟದ ಪ್ರತಿಭಾ ಸ್ಪರ್ಧೆಯಲ್ಲಿ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದವು. ದ್ವಿತೀಯ ವಿಜ್ಞಾನ ವಿಭಾಗದ ‘ವೈಬ್ ಹಂಟರ್ಸ್’ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ವಾಣಿಜ್ಯ ವಿಭಾಗದ ‘ಟ್ಯಾಲೆಂಟ್ ಜೋರ್’ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

By Suddi9

Leave a Reply

Your email address will not be published. Required fields are marked *