
ಮುಂಬೈ: ಬಾಲಿವುಡ್ ಸುಪರ್ ಸ್ಟಾರ್ ಸಲ್ಮಾನ್ ಖಾನ್ ಅವರು 2015ರಲ್ಲಿ ಹಸೆಮನೆ ಏರಲಿದ್ದಾರೆ ಎಂಬ ಸುದ್ದಿ ಮುಂಬೈಯ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿದೆ. ಸ್ವತಃ ಸಲ್ಮಾನ್ ಖಾನ್ ಅವರೇ ಈ ವಿಚಾರವನ್ನು ತಿಳಿಸಿದ್ದಾರೆನ್ನಲಾಗಿದೆ.
ಸಿನಿಮಾದಲ್ಲಿ ಮಿಂಚುತ್ತಿರುವ ಸಲ್ಮಾನ್ ಅವರು ಮದುವೆಯಾಗುವುದು ಮಾತ್ರ ಸಿನಿಮಾಕ್ಕೆ ಸಂಬಂಧಪಡದ ಹುಡುಗಿಯೊಬ್ಬಳನ್ನಂತೆ. `ಎಲ್ಲರೂ ನನ್ನ ಮದುವೆ ಯಾವಾಗ ಅಂತ ಕೇಳ್ತಾರೆ, ಮುಂದಿನ ವರ್ಷ ಜುಲೈ ಅಥವಾ ಅಕ್ಟೋಬರ್ ನಲ್ಲಿ ಸಿನಿಮಾಕ್ಕೆ ಸಂಬಂಧಪಡದ ಯುವತಿಯೊಂದಿಗೆ ನನ್ನ ಮದುವೆ ನಡೆಯಲಿದೆ’ ಎಂದು ಹೇಳಿರುವ ಬಗ್ಗೆ ವೆಬ್ ಸೈಟ್ ಒಂದು ವರದಿ ಮಾಡಿದೆ.
ಕಳೆದ ಹಲವಾರು ವರ್ಷಗಳಿಂದ ಸಲ್ಮಾನ್ ಮದುವೆ ಬಗ್ಗೆ ಗಾಸಿಪ್ ಹರಿದಾಡುತ್ತಲೇ ಇದೆ. ಸದ್ಯಕ್ಕೆ ಮದುವೆ ಬೇಡ ಎಂದು ಹೇಳುತ್ತಿದ್ದ ಸಲ್ಮಾನ್ ಗೆ ತನ್ನ ತಂಗಿ ಮದುವೆ ಆದ ಬಳಿಕ ಮದುವೆ ಆಸೆ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ.
