ಮುಂಬೈ: ಅತಿ ಗಳಿಕೆಯ ಚಿತ್ರವೆಂದು ಹೆಸರು ಪಡೆಯುತ್ತಿರುವ ಅಮೀರ್ ಖಾನ್ ನಟನೆಯ ಬಾಲಿವುಡ್ ಚಿತ್ರ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದೂಗಳ ಆರಾಧ್ಯ ದೇವರಾಗಿರುವ ಶಿವ ದೇವರನ್ನು ಈ ಚಿತ್ರದಲ್ಲಿ ಅತ್ಯಂತ ಅವಹೇಳನಕಾರಿಯಾಗಿ ಚಿತ್ರಿಸಲಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ. ಇದರಿಂದ ಸಮಾಜದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡುವ ಸಾಧ್ಯತೆ ಇದೆ ಎಂದು ಹಿಂದು ಸಂಘಟನೆಯ ಪ್ರಶಾಂತ್ ಪಾಟೇಲ್ ಎಂಬವರು ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಚಿತ್ರದಲ್ಲಿರುವ ಸಂಭಾಷಣೆಗಳನ್ನು ಸಹ ಪ್ರಕರಣದಲ್ಲಿ ನಮೂದಿಸಲಾಗಿದೆ.
