ಕಿನ್ನಿಗೋಳಿ: ಮೂಲ್ಕಿ ಠಾಣಾ ವ್ಯಾಪ್ತಿಯ ಕೊಲಕಾಡಿ ಎಂಬಲ್ಲಿ ಯುವಕನೋರ್ವ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಾರ್ನಾಡು ಅಮೃತಾನಂದಮಯಿ ನಗರದ ನಿವಾಸಿ ಗಿರಿಧರ್ (29) ಎಂದು ಗುರುತಿಸಲಾಗಿದ್ದು ಈತ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ. ಗಿರಿಧರ್ ತಂದೆಯನ್ನು ಕಳೆದುಕೊಂಡಿದ್ದು ಮನೆಯಲ್ಲಿ ತಾಯಿ, ಅಜ್ಜಿ, ಸಹೋದರಿ ಇದ್ದು ಕೂಲಿ ಕೆಲಸ ಮಾಡಿಕೊಂಡು ಮನೆಗೆ ಆಸರೆ ಆಗಿದ್ದನು. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

