ಉಡುಪಿ: ಕಾಫು ಸಮೀಪದ ಮೂಳೂರು ಎಂಬಲ್ಲಿ ಕಾರೊಂದು ಪಲ್ಟಿಯಾಗಿ ನೆಲಕ್ಕುರುಳಿದ ಘಟನೆ ಇಂದು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ನಡೆದಿದೆ. ಕಾಪುವಿನಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಮಾರುತಿ ಸುಝುಕಿ ಕಾರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯನ್ನು ದಾಟಿ ಮೂರು ಸುತ್ತು ಪಲ್ಟಿ ಹೊಡೆದು ರಸ್ತೆ ಬದಿಯ ಕೆಳಕ್ಕೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಯಾವುದೇ ಸಾವುನೋವು ನಡೆದ ಬಗ್ಗೆ ತಿಳಿದುಬಂದಿಲ್ಲ.


