ಸುದ್ದಿ9 ಕೈಕಂಬ:ಅಡ್ಡೂರು ಕಳಸಗುರಿಯಲ್ಲಿ ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಇದರ ನೂತನವಾಗಿ ನಿರ್ಮಿಸಿದ ಕಟ್ಟಡದ ಉದ್ಘಾಟನಾ ಸಮಾರಂಬವು ಡಿ.20ರಂದು ಶನಿವಾರ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಗಣಹೋಮ, 9ರಿಂದ ಸತ್ಯನಾರಾಯಣ ಪೂಜೆ, 11 ಗಂಟೆಗೆ ಸಭಾ ಕಾರ್ಯಕ್ರಮ ಜರಗಲಿದೆ.

ಸಭೆಯ ಅಧ್ಯಕ್ಷತೆಯನ್ನು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ್ ದುರ್ಗಾಪ್ರಸಾದ್ ಶೆಟ್ಟಿ ವಹಿಸಲಿದ್ದಾರೆ. ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶುಭಲಕ್ಷ್ಮೀ ಟ್ರಾವೆಲ್ಸ್ ಮಾಲಕ ಭುವನೇಶ್ ಪಚಿನಡ್ಕ, ಅಡ್ಡೂರು ಎ.ಕೆ ಶೇಖಬ್ಬ ,ನೂಯಿ ರವಿಶಂಕರ್ ರಾವ್, ಯು.ಪಿ ಇಬ್ರಾಹಿಂ ಅಡ್ಡೂರು ಇದೇ ಸಂದರ್ಭದಲ್ಲಿ ನಿವೃತ ಶಿಕ್ಷಕ ವಿಷ್ನುಮೂರ್ತಿ ರಾವ್ ಪೊಳಲಿ ಅವರನ್ನು ಸನ್ಮಾನಿಸಲಾಗುವುದು ರಾತ್ರಿ 9 ಗಂಟೆಯಿಂದ ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಕೋಟಿಚೆನ್ನಯ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

