ಮಕ್ಕಳ ಸುರಕ್ಷತೆಗಾಗಿ ಬಿಇಒ ಸೂಚನೆ

ಗುರುಪುರ : ವಾಮಂಜೂರು ತಿರುವೈಲಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಮೈದಾನ ಹಾಗೂ ಪಕ್ಕದ ರಸ್ತೆಗೆ ಹೊಂದಿಕೊAಡಿರುವ ಕಲ್ಲಿನ ಹಳೆಯ  ಆವರಣಗೋಡೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದಿದ್ದು, ಜು. ೨೦ರಂದು ಶಾಲೆಗೆ ಆಗಮಿಸಿದ್ದ ಮಂಗಳೂರು ದಕ್ಷಿಣ ಬಿಇಒ ಈಶ್ವರ ಎಚ್. ಆರ್., ಅವರು ಸ್ಥಳ ಪರಿಶೀಲನೆ ನಡೆಸಿ, ಮಹತ್ವದ ಸೂಚನೆ ನೀಡಿದರು.

ಬಿಇಒ ಅವರು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕ ಶಾಲೆಗೆ ಆಗಮಿಸಿ ಕುಸಿದು ಬಿದ್ದ ತಡೆಗೋಡೆ ಪರಿಶೀಲಿಸಿ ಎಚ್ಚರಿಕಾ ಕ್ರಮವಾಗಿ ಾವರಣಗೋಡೆಯ ಎದುರು ರಿಬ್ಬನ್ ಅಳವಡಿಸಿದರು. ಬಳಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಜೊತೆಗೆ ಮಾತುಕತೆ ನಡೆಸಿದ ನಂತರ ಸುಮಾರು ೪೦೦ ವಿದ್ಯಾರ್ಥಿಗಳ ಅಸೆಂಬ್ಲಿ ನಡೆಸಿ, ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.

“ಧಾರಾಕಾರ ಮಳೆಯಿಂದ ಶಾಲಾ ಮೈದಾನದ ಆವರಣಗೋಡೆ ಕುಸಿದಿದೆ. ಗೋಡೆಯ ಪಕ್ಕ ಅಥವಾ ಶಾಲೆಯ ಹಳೆಯ ಕಟ್ಟಡದ ಬಳಿ ಮಕ್ಕಳು ಸುಳಿದಾಡಬಾರದು. ಮಕ್ಕಳ ಸುರಕ್ಷತೆಯತ್ತ ಶಿಕ್ಷಕರು ಜಾಗೃತಿ ವಹಿಸಬೇಕು. ಈ ಎಚ್ಚರಿಕೆ ಮತ್ತು ಅರಿವಿನ ಸೂಚನೆ ಇತರ ಶಾಲೆಗಳಿಗೂ ಅನ್ವಯವಾಗುತ್ತದೆ” ಎಂದು ಬಿಇಒ ಈಶ್ವರ್ ಕೆ., ಅವರು ಮಕ್ಕಳ ಅಸೆಂಬ್ಲಿಯಲ್ಲಿ ತಿಳಿಸಿದರು.

ಆವರಣಗೋಡೆ ದುರಸ್ತಿ ಬಗ್ಗೆ ಶಾಲಾ ವತಿಯಿಂದ ಇಲಾಖೆಗೆ ಮನವಿ ಬಂದಲ್ಲಿ, ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಿ, ಮಳೆಹಾನಿ ಪರಿಹಾರ ಮೊತ್ತದಿಂದ ಕಾಮಗಾರಿ ನಡೆಸಲು ಪ್ರಯತ್ನಿಸುತ್ತೇವೆ. ಈ ವಿಷಯದಲ್ಲಿ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿದ್ದೇವೆ” ಎಂದು ಬಿಇಒ ಹೇಳಿದರು.

ಬಿಇಒ ಜೊತೆಯಲ್ಲಿ ಮುಖ್ಯ ಶಿಕ್ಷಕ ನಿಂಗರಾಜು ಕೆ. ಪಿ., ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಗದೀಶ ಕೆ, ಹಳೆ ವಿದ್ಯಾರ್ಥಿ ಅನಿಲ್ ರೈ ವಾಮಂಜೂರು ಇದ್ದರು.

By Suddi9

Leave a Reply

Your email address will not be published. Required fields are marked *