????????????

ಗುರುಪುರ : ಗುರುಪುರ-ಕೈಕಂಬ ಮೆಸ್ಕಾಂ ಶಾಖಾ ಕಚೇರಿ ವ್ಯಾಪ್ತಿಯಲ್ಲಿ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಸಂಬAಧಿಸಿ ಗ್ರಾಹಕರ ದಾಖಲೆ ಪರಿಶೀಲನಾ ಕಾರ್ಯ ಚುರುಕುಗೊಂಡಿದೆ. ಜುಲೈ ೩೧ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.

????????????

ಗುರುಪುರ ವ್ಯಾಪ್ತಿಯಲ್ಲಿ ಮನೆಮನೆಗಳಿಗೆ ಭೇಟಿ ನೀಡುವ ಮೆಸ್ಕಾಂ ಲೈನ್‌ಮ್ಯಾನ್‌ಗಳು ವಿದ್ಯುತ್ ಮೀಟರ್‌ಗೆ ಸಂಬAಧಿಸಿ ಬಿಲ್, ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಮತದಾರರ ಚೀಟಿ ಪಡೆದುಕೊಂಡು ಮೊದಲೇ ಭರ್ತಿ ಮಾಡಲಾದ ಅರ್ಜಿ ಫಾರಂ ಪರಿಶೀಲಿಸಿ ಆನ್‌ಲೈನ್ ಮೂಲಕ ದೃಢೀಕೃತ ಸಂಖ್ಯೆ ನಮೂದಿಸಿ, ಅರ್ಜಿ ಫಾರಂAಗೆ ಗ್ರಾಹಕರ ಭಾವಚಿತ್ರ ಅಂಟಿಸಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಾರೆ.

ಕೆಲವು ದಿನಗಳಿಂದ ಮಳೆಗೆ ಬಿಡುವುದರಿಂದ ಈ ಪ್ರಕ್ರಿಯೆ ಸುಲಭವಾಗಿದ್ದು, ಮಳೆ ಬಂದರೆ ಮೆಸ್ಕಾಂ ದೂರುಗಳಿಗೆ ಸ್ಪಂದಿಸಬೇಕಾಗುತ್ತದೆ ಎಂದು ಅರ್ಜಿ ಫಾರಂ ಭರ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಲೈನ್‌ಮ್ಯಾನ್‌ಗಳು ಹೇಳುತ್ತಿದ್ದಾರೆ

By Suddi9

Leave a Reply

Your email address will not be published. Required fields are marked *