ಬಂಟ್ವಾಳ: ಇಲ್ಲಿನ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘ, ವಿಜ್ಞಾನ ಸಂಘ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆಯನ್ನು ನೆರವೇರಿಸಲಾಯಿತು.
 
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಶ ಜಯವಂತ ನಾಯಕ್ ಅವರು ದೀಪ ಬೆಳಗಿಸಿ ವಿವಿಧ ಸಂಘವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. 
 ಶಾಲಾ ಸಂಚಾಲಕರಾದ  ಸುರೇಶ್ ವಿ ಬಾಳಿಗಾ, ಆಡಳಿತ ಮಂಡಳಿಯ ಸದಸ್ಯರು,  ಶಾಲಾ ಮುಖ್ಯೋಪಾಧ್ಯಾಯಿನಿ  ರೋಶನಿ ತಾರಾ ಡಿ’ಸೋಜ , ಸಹ ಮುಖ್ಯೋಪಾಧ್ಯಾಯಿನಿ  ಜಾನಕಿ ರಾಜೇಶ್ ಇವರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

By Suddi9

Leave a Reply

Your email address will not be published. Required fields are marked *