ಸುದ್ದಿ9 ಕೈಕಂಬ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇರುವೈಲ್ ಇಲ್ಲಿಯ ಮಹಿಮೆಯನ್ನು ಸಾರುವ ತುಳು ಭಕ್ತಿಗೀತೆ “ಇರುವೈಲ್ದ ಅಪ್ಪೆ ಉಳ್ಳಾಲ್ದಿ”ಎಂಬ ದ್ವನಿ ಸುರುಳಿ ಬಿಡುಗಡೆಯ ಸಮಾರಂಭವು ಇರುವೈಲ್ ಶ್ರೀ ಕ್ಷೇತ್ರದ ಹೊರಾಂಗಣದಲ್ಲಿ ಡಿ.28ರಂದು ಭಾನುವಾರ ಜರಗಲಿದೆ.
ದ್ವನಿ ಸುರುಳಿ ಬಿಡುಗಡೆಯನ್ನು ಇರುವೈಲ್ ಕ್ಷೇತ್ರದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಭುಜಂಗ ಆರ್ ಶೆಟ್ಟಿ ಮಾಡಲಿರುವರು. ಶ್ರೀ ಕ್ಷೇತ್ರದ ರಾಘವೇಂದ್ರ ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ ಅಧ್ಯಕ್ಷತೆಯನ್ನು ಸಾಂಬ ಸದಾಶಿವ ದೇವಸ್ಥಾನ ಬಾರ್ದಿಲ ಪ್ರಧಾನ ಅರ್ಚಕ ಅನಂತಪದ್ಮನಾಭ ಪೆಜತ್ತಾಯ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಚಲನಚಿತ್ರ ನಟ ದಿನೇಶ್ ಅತ್ತಾವರ್, ಇರುವೈಲ್ ದುರ್ಗಾಪರಮೇಶ್ವರಿ ಭಜನಾಮಂಡಳಿಯ ಅಧ್ಯಕ್ಷ ಚೆನ್ನಕೇಶವ ಶೆಟ್ಟಿ, ಪಲ್ಗುಣಿ ಯುವಕ ಮಂಡಲದ ಅಧ್ಯಕ್ಷ ವಿಶ್ವನಾಥ ದೇವಾಡಿಗ, ಇರುವೈಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಪೂಜಾರಿ ಭಾಗವಹಿಸಲಿದ್ದಾರೆ . ಸಾಯಂಕಾಲ 4.30ರಿಂದ ಮಂಗಳೂರು ಎಡಪದವು ಡ್ಯಾನ್ಸಿಂಗ್ ಸ್ಟಾರ್ ಡ್ಯಾನ್ಸ್ ಆಕಾಡೆಮಿ ಇವರಿಂದ ಭಕ್ತಿ ಪ್ರಧಾನ ನೃತ್ಯ ಪ್ರದರ್ಶನ ನಡೆಯಲಿರುವುದು ಎಂದು ಸಂತೋಷ್ ಪುಚ್ಚಮುಗರು ಹಾಗೂ ಸುಶಾಂತ್ ಸಚ್ಚರಿಪೇಟೆ ಜಂಟಿ ಹೇಳಿಕೆಯಲ್ಲಿ ಸುದ್ದಿ9ಗೆ ತಿಳಿಸಿದ್ದಾರೆ.
