ಸುದ್ದಿ9 ಕೈಕಂಬ: ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಎಂಬಲ್ಲಿನ ಗಲಭೆಪೀಡಿತ ಪ್ರದೇಶದ ಗಾಯಾಳುಗಳ ಮನೆಗೆ ಕೇರಳ ವರ್ಕಳ ಶಿವಗಿರಿಮಠದ ಶ್ರೀ ಸತ್ಯಾನಂದ ಸ್ವಾಮೀಜಿಯವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಮೊದಲು ಸ್ವಾಮೀಜಿ ಪೆರ್ಮಂಕಿ ಮತ್ತು ವಾಮಾಂಜೂರಿನ ಬಿಲ್ಲವ ಗುರುನಾರಾಯಣ ಮಂದಿರಕ್ಕೆ ಭೇಟಿ ನೀಡಿ ಬಿಲ್ಲವ ಮುಖಂಡರೊಂದಿಗೆ ಮಾತಾಡಿ ಚರ್ಚಿಸಿದರು. ಈ ಸಂದರ್ಭ ಪೆರ್ಮಂಕಿ ಬಿಲ್ಲವ ಸಂಘದ ಅಧ್ಯಕ್ಷ ಗಂಗಾಧರ ಮಾಸ್ಟರ್, ವಾಮಾಂಜೂರಿನ ಬಿಲ್ಲವ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ಬಿಲ್ಲವ ಮುಖಂಡರಾದ ಶ್ರೀನಿವಾಸ್ ಪೂಜಾರಿ, ಶೇಖರ್ ಪೂಜಾರಿ, ದಿನೇಶ್ ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು. ಗಾಯಾಳುಗಳಿಗೆ ಬಿಲ್ಲವ ಸಂಘದ ವತಿಯಿಂದ ಸಹಾಯ ನೀಡುವ ಭರವಸೆಯನ್ನು ನೀಡಲಾಯ್ತು.

