ಬಂಟ್ವಾಳ:ತಾಲೂಕಿನ ಅಮ್ಟೂರು ನೈಮಿಷಾರಣ್ಯದಲ್ಲಿ ಸಹಸ್ರ ವೃಕ್ಷರೋಹಣ ಕಾರ್ಯಕ್ರಮದ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಗ್ರಾಮ ವಿಕಾಸ ಮತ್ತು ಭಾರ್ಗವ ಕ್ರೀಡಾಸಂಘದ ವಿದ್ಯಾರ್ಥಿಗಳಿಂದ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ . ವಿದ್ಯಾರ್ಥಿಗಳು ಒಟ್ಟು ೩೨೪ ಗೇರು ಸಸಿಗಳನ್ನು ನಾಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಲಕ್ಷ್ಮೀ ರಘುರಾಜ್, ನೈಮಿಷಾರಣ್ಯದ ನಿರ್ವಾಹಕರಾದ ಪದ್ಮನಾಭ, ಶ್ರೀರಾಮ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ವಸಂತ ಬಲ್ಲಾಳ್, ಉಪ ಪ್ರಾಂಶುಪಾಲರಾದ ದಿನೇಶ್,ಉಪನ್ಯಾಸಕರಾದ ಅಶೋಕ್ ಕುಮಾರ್, ಸುಶಾಂತ್, ಉಪನ್ಯಾಸಕೇತರರಾದ ಸೋಮಶೇಖರ್ , ಹಿರಿಯ ವಿದ್ಯಾರ್ಥಿಗಳಾದ ಶ್ರೀ ಗೌರಿ ಮತ್ತು ಭಾರ್ಗವ ಉಪಸ್ಥಿತರಿದ್ದರು.
