ಬಂಟ್ವಾಳ: ಉಭಯ ಕರಾವಳಿ ಜಿಲ್ಲೆಗಳು  ಅಪರೂಪಕ್ಕೆಂಬಂತೆ ಬರಗಾಲ ಎದುರಿಸುವಂತಹ ದುಸ್ಥಿತಿ ಉಂಟಾಗಿದ್ದು,ಸರಕಾರದ ಮಾರ್ಗಸೂಚಿಯಂತೆ ಬರಗಾಲ ಪರಿಹಾರ ಕಾರ್ಯಕ್ರಮ ಕೈಗೊಳ್ಳುವಂತೆ
ಕ.ರಾ.ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹಾಗೂ  ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಧರ ಶೆಟ್ಟಿ ಬೈಲುಗುತ್ತು ಅವರು ಒತ್ತಾಯಿಸಿದ್ದಾರೆ

ಶೇ. 60ಕಿಂತ ಕಡಿಮೆ ಮಳೆ ಸುರಿದ ಪ್ರದೇಶದಲ್ಲಿ ಸರಕಾರದ ಮಾರ್ಗಸೂಚಿಯಂತೆ ಬರಗಾಲ ಪರಿಹಾರ ಕಾರ್ಯಕ್ರಮಗಳನ್ನು ಉಭಯ ಜಿಲ್ಲೆಗಳಲ್ಲಿ ಕೈಗೊಂಡು ರೈತರು ಈಗಾಗಲೇ ಪಡೆದಿರುವ ಸಾಲಗಳನ್ನು ಮನ್ನಾ ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜಂಟಿ ಪ್ರಕಟಣೆಯ ಮೂಲಕ   ಒತ್ತಾಯಿಸಿದ್ದಾರಲ್ಲದೆ ಈ ಬಗ್ಗೆ ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಗಮನ ಹರಿಸುವಂತೆಯು ಮನವಿ ಮಾಡಿದ್ದಾರೆ. 

By Suddi9

Leave a Reply

Your email address will not be published. Required fields are marked *