ಬಂಟ್ವಾಳ: ಕಲ್ಲಡ್ಕ ರಾಮ ಪದವಿ ಪೂರ್ವ ವಿದ್ಯಾಲಯದಲಿ ಎನ್ ಸಿ ಸಿ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ವಸಂತ ಬಲ್ಲಾಳ್ ವಹಿಸಿ ಮಾತನಾಡಿ,ಎನ್ ಸಿ ಸಿ ಯ ಶಿಸ್ತು ವಿದ್ಯಾರ್ಥಿಗಳ ನಿಜ ಜೀವನದಲ್ಲಿ ಪ್ರಕಟಗೊಳ್ಳಬೇಕು ಎಂದರು

ಮಾಜಿ ಸೈನಿಕ ಮತ್ತು ಪ್ರಸ್ತುತ ೧೮ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯಲ್ಲಿ ಪಿ.ಐ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಯನ್.ಬಿ. ಪಾಟೀಲ್ ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಯ ಬಗ್ಗೆ ತಿಳಿಸಿಕೊಟ್ಟರು. ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲರಾದ ದಿನೇಶ್ ಕಾರ್ಯಕ್ರಮವನ್ನು ನಿರ್ವಹಿಸಿದರು.
