ಸಂಘಟನೆಯಿಂದ ಅಕ್ಕಿ, ವಸ್ತ್ರ, ಊಟ ಕೊಡುಗೆ

ಗುರುಪುರ : ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ, ಬಾಲ ಸಂಸ್ಕಾರ ಕೇಂದ್ರ, ಯುವ ಕೇಸರಿ ಒಡ್ಡೂರು ಹಾಗೂ ಊರ ದಾನಿಗಳ ಸಹಕಾರದಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿಯ ಸ್ನೇಹ ಭಾರತಿ ವಿದ್ಯಾ ಸಂಸ್ಥೆಯ ಹಿರಿಯರ ಮನೆ ವೃದ್ಧಾಶ್ರಮಕ್ಕೆ ಜೂ. ೨೮ರಂದು ಕೆಲವು ಮೂಟೆ ಅಕ್ಕಿ ಹಾಗೂ ಇತರ ಸಾಮಾಗ್ರಿ, ವಯೋವೃದ್ಧರಿಗೆ ಪಂಚೆ, ಸೀರೆ ಮತ್ತಿತರ ದಿನನಿತ್ಯದ ವಸ್ತ್ರ  ಮತ್ತು ಆಶ್ರಮದ ಎಲ್ಲರಿಗೂ ಊಟದ ವ್ಯವಸ್ಥೆ ಆಯೋಜಿಸಿತು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಆಶ್ರಮವಾಸಿಗಳಿಗೆ ಬಟ್ಟೆಬರೆ ವಿತರಿಸಿ, ಹಿಂದೂ ಸಂಘಟನೆಗಳು ಹಮ್ಮಿಕೊಂಡಿರುವ ಸಮಾಜಮುಖಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಬಜರಂಗದಳ ಪ್ರಾಂತ ಸಹ ಸಂಯೋಜಕ ಭುಜಂಗ ಕುಲಾಲ್ ಆದ್ಯಪಾಡಿ, ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ಯುವ ಕೇಸರಿ ಘಟಕ ಒಡ್ಡೂರು ಇದರ ಸ್ಥಾಪಕ ಜನಾರ್ದನ ಒಡ್ಡೂರು, ಘಟಕದ ಅಧ್ಯಕ್ಷ ಜಗದೀಶ ಒಡ್ಡೂರು, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ ನಾರಳ, ಶ್ರವಣ್ ಶೆಟ್ಟಿ ಮೊಗರು, ಪ್ರವೀಣ್ ಆಳ್ವ, ನಾರಾಯಣ ಪೂಜಾರಿ, ಓಂ ಜನಹಿತಾಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ರಕ್ಷಾ ಆರ್ ಶೆಟ್ಟಿ, ಹಿರಿಯರ ಮನೆಯ ಉಸ್ತುವಾರಿ ರಾಮ್ ಗೌಡ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *