ಮೂಡುಶೆಡ್ಡೆ ಸರ್ಕಾರಿ ಶಾಲೆಯ ೨೦೧ ಮಕ್ಕಳಕಿಗೆ ರಘು ಸಾಲ್ಯಾನ್ ಬಣ್ಣದ ಜೆರ್ಸಿ ವಿತರಣೆ

ಗುರುಪುರ : ಮೂಡುಶೆಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ. ೨೯ರಂದು ಆಯೋಜಿಸಲಾದ ಸರಳ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ೨೦೧ ಮಕ್ಕಳಿಗೆ ಬಣ್ಣದ ಜೆರ್ಸಿ(ಸಮವಸ್ತç) ವಿತರಿಸಲಾಯಿತು.

ತಿರುವೈಲು ಸರ್ಕಾರಿ ಶಾಲೆಯ ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಇದರ ಅಧ್ಯಕ್ಷ, ಉದ್ಯಮಿ ರಘು ಸಾಲ್ಯಾನ್ ಅವರು ತನ್ನ ಪುತ್ರ ವೈಶಾಖ್ ಅವರ ಹುಟ್ಟುಹಬ್ಬದ(ಜು. ೧೫) ಸವಿನೆನಪಿಗಾಗಿ ಮೂಡುಶೆಡ್ಡೆ ಶಾಲೆಯ ಎಲ್ಲ ಮಕ್ಕಳಿಗೆ ಜೆರ್ಸಿ ವಿತರಿಸಿದರು.

ತಿರುವೈಲು ಸರ್ಕಾರಿ ಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಯು ಅವರು ಮಾತನಾಡಿ, ಖಾಸಗಿ ಶಾಲಾ ಮಕ್ಕಳಂತೆ ಸರ್ಕಾರಿ ಮಕ್ಕಳೂ ವಿಜೃಂಭಿಸಬೇಕು ಎಂಬೀ ನಿಟ್ಟಿನಲ್ಲಿ ರಘು ಸಾಲ್ಯಾನ್ ಅವರು ಇಲ್ಲೂ ಒಂದು ಉತ್ತಮ ಕೆಲಸ ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ. ಸರ್ಕಾರಿ ಮಕ್ಕಳಲ್ಲಿ ಬೇರೂರಿರುವ `ಕೀಳರಿಮೆ’ ಕಡಿಮೆಗೊಳಿಸುವಲ್ಲಿ ಇಂತಹ ಸಮಾಜಮುಖಿ ಕೆಲಸಗಳು ಸಹಕಾರಿಯಾಗಲಿವೆ. ಸರ್ಕಾರಿ ಶಾಲೆಗಳು ಉಳಿಯಬೇಕು ಮತ್ತು ಬಡವರ ಮಕ್ಕಳು ಉತ್ತಮ ಜೀವನ ಸಾಗಿಸುವಂತಾಗಬೇಕು ಎಂದರು.

ರಘು ಸಾಲ್ಯಾನ್ ಮಾತನಾಡಿ, ಇದು ನನ್ನೂರಿಗೆ ಪಕ್ಕದ ಶಾಲೆ. ತಿರುವೈಲು ಶಾಲೆಯಂತೆ ಇಲ್ಲಿನ ಮಕ್ಕಳೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಮುಂದಿನ ಬಾರಿ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆಯಾಗಿ ನೀಡುವೆ. ಸರ್ಕಾರಿ ಶಾಲಾ ಮಕ್ಕಳು ಖಾಸಗಿ ಶಾಲಾ ಮಕ್ಕಳಿಗಿಂತ ಏನೇನೂ ಕಡಿಮೆ ಅಲ್ಲ ಎಂಬುದನ್ನು ನೀವು ರುಜುಪಡಿಸಬೇಕು ಎಂದರು.

ಮೂಡುಶೆಡ್ಡೆ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ ಕೊಟ್ಟಾರಿ, ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ಪುತ್ರ ವೈಶಾಖ್, ರಘು ಸಾಲ್ಯಾನ್, ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಶೆಡ್ಡೆ, ಗೋಪಾಲ ಯು, ಹೇಮೇಂದ್ರ ವಾಮಂಜೂರು, ಎಸ್ ಡಿಎಂಸಿ ಅಧ್ಯಕ್ಷ ವಿನಾಯಕ, ಉಪಾಧ್ಯಕ್ಷೆ ಆಶಾ ಆಚಾರ್ಯ, ಎಸ್ ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮೋಲಿ ಗ್ರೇಸಿ ವಾಸ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಎಸ್‌ಐಆರ್ ದುರಂತ !

ಮೂಡುಶೆಡ್ಡೆ ದಕಜಿಪಂ ಸರ್ಕಾರಿ ಶಾಲೆಯಲ್ಲಿ ಒಟ್ಟು ೬ ಖಾಯಂ ಶಿಕ್ಷಕರು ಹಾಗೂ ೩ ಅತಿಥಿ ಶಿಕ್ಷಕರಿದ್ದಾರೆ. ೬ ಮಂದಿ ಖಾಯಂ ಶಿಕ್ಷಕರಲ್ಲಿ ೫ ಮಂದಿಯನ್ನು ಎಸ್‌ಐಆರ್ ಬಿಎಲ್‌ಒ ಕರ್ತವ್ಯಕ್ಕೆ ನಿಯುಕ್ತಿಗೊಳಿಸಲಾಗಿದೆ. ಮುಂದಿನ ಒಂದು ತಿಂಗಳು ಉಳಿದಿರುವ ಮುಖ್ಯಶಿಕ್ಷಕಿ ಹಾಗೂ ಮೂವರು ಅತಿಥಿ ಶಿಕ್ಷಕರು ಶಾಲಾ ಕರ್ತವ್ಯ ನಿರ್ವಹಿಸಬೇಕಿದೆ. ಇದರಿಂದ ಶಾಲಾ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಲಿದೆ. ಬಹುತೇಕ ಎಲ್ಲ ಶಾಲೆಗಳಿಂದ ಒಂದಿಬ್ಬರು ಶಿಕ್ಷಕರನ್ನು ಬಿಎಲ್‌ಬಿಗಳಾಗಿ ನಿಯುಕ್ತಿಗೊಳಿಸಲಾಗಿದ್ದರೆ, ಮೂಡುಶೆಡ್ಡೆ ಶಾಲೆಯಿಂದ ಐವರನ್ನು ನಿಕ್ತಿಗೊಳಿಸಲಾಗಿದೆ. ಶಿಕ್ಷಕರ ಗೈರಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ತೊಂದರೆಯಾಗಲಿದೆ ಎಂದು ಶಿಕ್ಷಣ ಇಲಾಖೆ ಹಾಗೂ ಸಂಬAಧಪಟ್ಟ ಇತರ ಇಲಾಖೆಗಳಿಗೆ ದೂರಿಕೊಡಿದ್ದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಸ್‌ಡಿಎಂಸಿ ಹಾಗೂ ಮಕ್ಕಳ ಪಾಲಕರು ದೂರಿಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *