ಬಂಟ್ವಾಳ :  ಧಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ಬಂಟ್ವಾಳ ತಾಲೂಕು 2026-27 ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ ಆತ್ಮ ಯೋಜನೆಯಡಿಯಲ್ಲಿ ಜಿಲ್ಲೆಯೊಳಗಿನ ರೈತರಿಗೆ ನೈಸಗಿಕ ಕೃಷಿ ಹಾಗೂ ಸಮತೋಲತ ರಸಗೊಬ್ಬರ ಬಳಕೆ ಕುರಿತು ಕೃಷಿ ಮಾಹಿತಿ.ಕಾರ್ಯಾಗಾರವು ವೀರಕಂಭ ಗ್ರಾಮದ ಮಜೊನಿ ಕುಸುಮ ರವೀಂದ್ರ ಶೆಟ್ಟಿಯವರ ಮನೆ ವಠಾರದಲ್ಲಿ ಜರಗಿತು.

ಕಾರ್ಯಾಗಾರವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿದ್ದ ಕುಸುಮ ರವೀಂದ್ರ ಶೆಟ್ಟಿ ಮಾತನಾಡಿ ಕೃಷಿ ವಿಜ್ಞಾನಿಗಳು ನೀಡುವಂತ ಉಪಯುಕ್ತವಾದ  ಮಾಹಿತಿಯನ್ನು ರೈತರು ಅರಿತುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ
ಮಂಗಳೂರಿನ ಕೆವಿಕೆ ಮಣ್ಣು ಆರೋಗ್ಯ ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಅವರು ಮಾಹಿತಿ ನೀಡಿ, ಸಮತೋಲಿತ ಗೊಬ್ಬರ ಬಳಕೆ, ರಾಸಾಯನಿಕ ಹೊರೆ ಕಡಿಮೆ,ನೈಸರ್ಗಿಕ ಕೃಷಿಗೆ ಉತ್ತೇಜನೆ,ವಿಷಮುಕ್ತ ಆಹಾರ, ಜಲ- ಪರಿಸರ ಸಂರಕ್ಷಣೆ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ಕಾಪಾಡಬೇಕೆಂದರಲ್ಲದೆ ಸಮಗ್ರ ಪೋಷಕಾಂಶ ನಿರ್ವಹಣೆಯ ಬಗ್ಗೆಯು ಮಾಹಿತಿಯನ್ನು ನೀಡಿದರು.
ಮಂಗಳೂರಿನ ಕೆವಿಕೆ ಹೈನುಗಾರಿಕಾ ವಿಜ್ಞಾನಿ ಡಾ. ದರ್ಣೇಶ್ ಅವರು  ಸಾವಯುವ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕೃಷಿ ಇಲಾಖೆ ಬಂಟ್ವಾಳ ತಾಲೂಕು ವಿಟ್ಲ ಹೋಬಳಿಯ ಆತ್ಮ ಯೋಜನೆಯ ತಾಂತ್ರಿಕ ಸಹಾಯಕರಾದ ವಿರೂಪಾಕ್ಷ ಹಡುಪದ್ ರವರು ಕೃಷಿ ಇಲಾಖೆಯಿಂದ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
  ವೀರಕಂಭ  ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಶಂಭು ಕುಮಾರ್ ಶರ್ಮ,  ಪ್ರಗತಿಪರ ಕೃಷಿಕರಾದ ತಿರುಮಲ ಕುಮಾರ್ ಮಜಿ ಉಪಸ್ಥಿತರಿದ್ದರು.
ಬೋಳಂತೂರು ಮತ್ತು ಪೆರುವಾಯಿ ಕೃಷಿ ಸಖಿ, ಪಶು ಸಖಿಯರು ಹಾಗೂ ವೀರಕಂಭ ಗ್ರಾಮದ ಸ್ನೇಹ ಸಂಜೀವಿನಿ ಸಿಬ್ಬಂದಿಗಳಾದ ರೂಪ, ಜಯಂತಿ, ಪ್ರಚೀನ ಉಪಸ್ಥಿತರಿದ್ದರು,
ರೈತರು ತಮ್ಮ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳಲ್ಲಿ ಅನುಭವಗಳನ್ನು ಹಂಚಿಕೊಂಡರು ರೈತರಿಗೆ ಮಣ್ಣು ಪರೀಕ್ಷೆ ಮಾಡಿದ ಮಣ್ಣು ಕಾರ್ಡ್ ವಿತರಿಸಲಾಯಿತು.
ಕೆಲಿಂಜ ಶಾಖೆಯ ಯೋಗ ಶಿಕ್ಷಕರಾದ ಬಾಬಾ ಕಿರಣ್  ಪ್ರಾರ್ಥಿಸಿದರು.ಎನ್ ಆರ್ ಎಲ್ ಎಂ ವೀರಕಂಭ ಗ್ರಾಮದ ಎಂ ಬಿ ಕೆ   ಮಲ್ಲಿಕಾ ಶೆಟ್ಟಿ ಸ್ವಾಗತಿಸಿದರು,ವೀರಕಂಭ ಗ್ರಾಮದ ಕೃಷಿ ಸಖಿ ನಮಿತಾ ರೈ ವಂದಿಸಿದರು.ವೀರಕಂಭ ಗ್ರಾಮದ ಸಿ ಆರ್ ಪಿ  ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *