ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ನ ಬಂಟ್ವಾಳ ವಲಯದ ವತಿಯಿಂದ ಭಾರತ ಸರಕಾರದ ಅಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿ ಗೆ ಒಂದು ತಿಂಗಳ ಪೌಷ್ಟಿಕ ಆಹಾರ ಸಾಮಾಗ್ರಿಗಳ ಕಿಟ್ ನ್ನು ಬಿ.ಮೂಡ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಿಸಲಾಯಿತು.

ಈ ಸಂದರ್ಭ ದಲ್ಲಿ ವಲಯದ ಅಧ್ಯಕ್ಷರಾದ ರಾಜೇಂದ್ರ ಕೆ, ವೈದ್ಯಾಧಿಕಾರಿ ಡಾ, ಅಶ್ವಿನಿ ಬಾಲಕೃಷ್ಣ, ಮಾಜಿ ಅಧ್ಯಕ್ಷ ರುಗಳಾದ ದಯಾನಂದ್ ಬಂಟ್ವಾಳ್, ಚಿತ್ರ ರಮೇಶ್, ಹರೀಶ್ ಕುಂದರ್, ಉಪಾಧ್ಯಕ್ಷರಾದ ಹರೀಶ್ ನಾಟಿ, ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್, ಛಾಯಾ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಹಾಗೂ ಆಸ್ಪತ್ರೆ ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
