ಬಂಟ್ವಾಳ : ಇತ್ತೀಚೆಗೆ ಲೋಕಾರ್ಪಣೆಗೊಂಡ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆ  ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ     ದೃಢಕಲಶ ಸಂಪ್ರೋಕ್ಷಣಾ ಪೂಜೆ ಕೇಶವ ಶಾಂತಿಯವರ ನೇತೃತ್ವದಲ್ಲಿ ಶುಕ್ರವಾರ  ನೆರವೇರಿಸಲಾಯಿತಲ್ಲದೆ ಬಳಿಕ ಭಕ್ತರ ಅವಲೋಕನ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಮಾಜಿ ಶಾಸಕರಾದ  ರುಕ್ಮಯ ಪೂಜಾರಿ,ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ನಾರಾಯಣ ಪೂಜಾರಿ ನಿಡ್ಯೆ,ಮಂದಿರದ ಟ್ರಸ್ಟ್ ಕಾರ್ಯದರ್ಶಿ ಮೋಹನ್ ಪಿ ಯಸ್, ‌ಟ್ರಸ್ಟಿಗಳಾದ ಶರತ್ ಕುಮಾರ್, ಜಯರಾಮ ಕಲ್ಲಪಾಪು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಶಿವರಾಜ್ ಕಾಂದಿಲ, ಸುಭಾಷ್ ದಾಸಕೋಡಿ,ಕೃಷ್ಣಪ್ಪ ಜಿಸಾಲಿಯಾನ್, ಮೀನಾಕ್ಷಿ ಆರ್ ಪೂಜಾರಿ, ಯಶೋಧಾ ನಿಡ್ಯೆ, ಮಲ್ಲಿಕಾ ಸೇನೆರೆ ಕೋಡಿ,ಕುಮಾರ ಕಾಂದಿಲ, ಅಶೋಕ್ ಕುಮಾರ್,ತಾರಾನಾಥ,ಗಣೇಶ್ ನಗರ, ರಮೇಶ್ ಅನಂತಾಡಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ನಡೆದ ಅವಲೋಕನಾ ಸಭೆಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಮಂದಿರಕ್ಕಾಗಿ ಸ್ವಯಂಸೇವಕರಾಗಿ ಹಗಲಿರುಳು ಸೇವೆಗೈದ ಜೀರ್ಣೋದ್ಧಾರ ಸಮಿತಿಯ ಎಲ್ಲಾ ಹಿರಿಯ, ಕಿರಿಯ  ಕಾರ್ಯಕರ್ತರು,ಭಾಗವಹಿಸಿದ ಸಂಘ ಸಂಸ್ಥೆಗಳು, ತನು,ಮನ,ಧನದ ರೂಪದಲ್ಲಿ ಸಹಕರಿಸಿದ ಪ್ರತಿಯೋರ್ವ ದಾನಿಗಳಿಗೆ,ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ  ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

By Suddi9

Leave a Reply

Your email address will not be published. Required fields are marked *