ಮುಂಬೈ: ಸಿಡ್ನಿ ದಾಳಿಯಂಥ ಪ್ರಕರಣಗಳು ಭಾರತದಲ್ಲಿ ನಡೆಯುವುದನ್ನು ಮತಾಂತರ ಮೂಲಕವಷ್ಟೇ ತಡೆಯಬಹುದೆಂದು ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ನೀಲೇಶ್‌ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿಡ್ನಿಯಲ್ಲಿ ಜರುಗಿದಂತ ಘಟನೆ ಜಗತ್ತಿ ನಾದ್ಯಂತ ನಡೆಯುತ್ತಿದೆ. ಆದಷ್ಟು ಜನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿದರೆ ಭಾರತ ದಲ್ಲಿ ಇಂಥ ಘಟನೆ ನಡೆಯುವುದನ್ನು ತಪ್ಪಿಸಬಹುದು ಎಂದು ನೀಲೇಶ್‌ ಟ್ವೀಟ್‌ ಮಾಡಿದ್ದಾರೆ.

sydney

ಉತ್ತರಪ್ರದೇಶದಲ್ಲಿ ನಡೆದ ಸಾಮೂಹಿಕ ಮತಾಂತರಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಹಿರಿಯ ಕಾಂಗ್ರೆಸ್‌ ನಾಯಕ ನಾರಾಯಣ ರಾಣೆ ಪುತ್ರ ನೀಲೇಶ್‌ ರಾಣೆ ಈ ಹೇಳಿಕೆ ನೀಡಿರುವುದು ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಾಣೆ, ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸಬಾರದು, ಯಾರಾದರೂ ತಮ್ಮ ಧರ್ಮವನ್ನು ಬದಲಾಯಿಸಲು ಇಚ್ಛಿಸಿದರೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಹೇಳಿದ್ದಾರೆ.

By Suddi9

Leave a Reply

Your email address will not be published. Required fields are marked *