ಬಂಟ್ವಾಳ: ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್ ಇದರ ಸೇವಾ ಸಮಿತಿಯ ಮೂರಯ ವರ್ಷದ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಯುವ ವೇದಿಕೆಯ ಸಲಹೆಗಾರರಾದ ಬಿ. ಮೋಹನ್ ಅವರನ್ನು ಅಭಿನಂದಿಸಲಾಯಿತು.
ಅವರ ಅಧ್ಯಕ್ಷ ಹುದ್ದೆಯ ಅವಧಿಯಲ್ಲಿ ಶ್ರೀ ದೇವಿಯ ಸನ್ನಿಧಿಯ ನಡೆಯುವ ಎಲ್ಲಾ ಧರ್ಮ ಕಾರ್ಯಗಳಿಗೆ ಯುವ ವೇದಿಕೆಯ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ಮೋಹನ್ ಅವರು ಒಂದು ಕಾಲದಲ್ಲಿ ದೇವರ ಚಾಕಿರಿ ಮಾಡಲು ಮಾತ್ರ ಸೀಮಿತವಾಗಿದ್ದ ಸಮುದಾಯದ ನನಗೆ ಆಡಳಿತ ಮಾಡಲು ಅವಕಾಶ ಒದಗಿರುವುದು ಸುಯೋಗವಾಗಿದೆ ಎಂದರು.
ಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರೀದೇವಿಯ ಸೇವೆ ಮಾಡುವುದಾಗಿ ಭರವಸೆ ನೀಡಿದ ಅವರು ಶ್ರೀ ದೇವಿಯ ಅನುಗ್ರಹದಿಂದ ಯುವ ವೇದಿಕೆಯು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ ಎಂದು ಹಾರೈಸಿದರು.
ಯುವ ವೇದಿಕೆಯ ಸುಕುಮಾರ್ ಬಂಟ್ವಾಳ, ಸುಮಿತ್ ಸಾಲ್ಯಾನ್ ಸೊರ್ನಾಡ್, ಗಣೇಶ್ ಕಾಮಾಜೆ, ಸೌಮ್ಯ ಸುಕುಮಾರ್,ಕಿಶೋರ್ ಬಂಗೇರ ಏರ್ಯ, ಸಂತೋಷ್ ಮಯ್ಯರ ಬೈಲು, ಸಂತೋಷ್ ಮರ್ತಾಜೆ ,ಪುನೀತ್ ಕಾಮಾಜೆ,ನಿತೀಶ್ ಕುಲಾಲ್ ಪಲ್ಲಿಕಂಡ ಉಪಸ್ಥಿತರಿದ್ದರು.
ಹಿರಿಯರಾದ ಶೇಷಪ್ಪ ಮಾಸ್ತರ್ ಪ್ರಸ್ತಾವಿಸಿ, ಹೆಚ್ ಕೆ ನಯನಾಡು ವಂದಿಸಿದರು.
