ಬಂಟ್ವಾಳ: ಜಿಲ್ಲೆಯ ಜೀವ ನದಿ ನೇತ್ರಾವತಿಯ ತೀರ ಬಂಟ್ವಾಳದಲ್ಲಿ ಮೂರುದಿನಗಳ ಕಾಲ ನಡೆಯುವ
ದ.ಕ.ಜಿಲ್ಲಾ 28 ನೇ ಕನ್ನಡ ಸಾಹಿತ್ಯೋತ್ಸವಕ್ಕೆ ಗುರುವಾರ ಸಂಜೆ “ಕನ್ನಡ ಸಾಂಸ್ಕೃತಿಕ ದಿಬ್ಬಣ” ದ ಮೆರವಣಿಗೆಯ ಮೂಲಕ ಸಂಭ್ರಮದ ಚಾಲನೆ ನೀಡಲಾಯಿತು.
ಬಿ.ಸಿ.ರೋಡಿನ ಕೈಕಂಬದಲ್ಲಿರುವ ಪೊಳಲಿ ದ್ವಾರದಿಂದ ಹೊರಟ ಕನ್ನಡ ಭುವನೇಶ್ವರಿಯ ಮೆರವಣಿಗೆ ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಸಾಗಿ ಬಂದು ನಾರಾಯಣ ಗುರುವೃತ್ತದ ಬಳಿ ಹಾಕಲಾದ ಸ್ವಾತಂತ್ರ್ಯ ಯೋಧ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಅವರಹೆಸರಿನ ಪ್ರಧಾನ ಪ್ರವೇಶ ಧ್ವಾರವನ್ನು ಪ್ರವೇಶಿಸಿ, ಸ್ಪರ್ಶಾಕಲಾಮಂದಿರದ ಪಂಜೆ ಮಂಗೇಶರಾಯ ಹೆಸರಿನ ಸಭಾಂಗಣದಲ್ಲಿ ಸಂಪನ್ನಗೊಂಡಿತು.

ಬಿ.ಸಿ.ರೋಡಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೋ.ತುಕರಾಮ್ ಪೂಜಾರಿ ಅವರು ಕೈಕಂಬ ಪೊಳಲಿದ್ವಾರದ ಬಳಿ ಕನ್ನಡದ ಧ್ವಜ ಹಸ್ತಾಂತರಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ದಲ್ಲಿ ಸಮ್ಮೇಳನಾಧ್ಯಕ್ಷರಾದ ಹಿರಿಯ ಪತ್ರಕರ್ತರು,ಸಾಹಿತಿಗಳಾದ ಚಿದಂಬರ ಬೈಕಂಪಾಡಿ ಅವರಿಗೆ ಮಲ್ಲಿಗೆಯ ಹಾರಹಾಕಿ ಪೇಟ ತೊಡಿಸಿ ಸ್ವಾಗತಿಸಲಾಯಿತು.ನೆರೆದ ಗಣ್ಯರು ಕನ್ನಡ ಭುನೇಶ್ವರಿಗೆ ಪುಪ್ಪಾರ್ಚನೆಗೈದರು.

ಸಮ್ಮೇಳನಾಧ್ಯಕ್ಷರಾದ ಚಿದಂಬರ ಬೈಕಂಪಾಡಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೋ.ತುಕರಾಮ್ ಪೂಜಾರಿ ಅವರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ಸಮ್ಮೇಳನ ಸಭಾಂಗಣದತ್ತ ಮೆರವಣಿಗೆಯಲ್ಲಿ ಕರೆತರಲಾಯಿತು.


ಶಾಲಾ ಮಕ್ಕಳ ಸ್ಕೌಟ್ಸ್ ,ಗೈಡ್ಸ್,ಬುಲ್ ಬುಲ್ಸ್,ಗೊಂಬೆ ಕುಣಿತ, ಡೊಳ್ಳುಕುಣಿತ,ಮಕ್ಕಳ ಕುಣಿತ ಭಜನೆ,ಕಂಬಳದ ಕೋಣ,ಚೆಂಡೆ,ವಾದ್ಯಗೋಷ್ಠಿ ಗಳು ಮೆರವಣಿಗೆ ವಿಶೇಷ ಮೆರಗು ನೀಡಿತು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್,ಸ್ವಾಗತ ಸಮಿತಿ ಪ್ರ.ಕಾರ್ಯದರ್ಶಿ ಅಬುಬಕ್ಕರ್ ಅಮ್ಮುಂಜೆ,ಕಾರ್ಯದರ್ಶಿಗಳಾದ ದೇವಪ್ಪ ಕುಲಾಲ್,ರಾಮದಾಸ್ ಬಂಟ್ವಾಳ, ಚಂದ್ರಹಾಸ ಶೆಟ್ಟಿ,ಕೋಶಾಧಿಕಾರಿ ಸುಭಾಶ್ಚಂದ್ರಜೈನ್ ವಿವಿಧ ಸಮಿತಿಯ ಪದಾಧಿಕಾರಿಗಳಾದ ಪ್ರಭಾಕರ ಪ್ರಭು,ಸರಾಡಿ,ಅಶೋಕ್ ಶೆಟ್ಟಿ,ಕೃಷ್ಣಕುಮಾರ್ ಪೂಂಜಾ,ಎಚ್.ಕೆ.ನಯನಾಡು,ಸೇಷಪ್ಪ ಮಾಸ್ಟರ್ ತುಂಬೆ,ಅಬ್ಬಾಸ್ ಅಲಿ,ಸುಕುಮಾರ್ ಬಂಟ್ವಾಳ,ಮಚ್ಚೇಂದ್ರ ಸಾಲಿಯಾನ್,ಮೋಹನ್ ಶೆಟ್ಟಿ ಪಂಜಿಕಲ್ಲು,ರಮಾನಂದ ನೂಜಿಪ್ಪಾಡಿ, ಉಮ್ಮರ್ ಮಂಚಿ ಸೇರಿದಂತೆ ಹಲವಾರು ಗಣ್ಯರು,ಸಾಹಿತ್ಯಾಸಕ್ತರು,ಸಾಹಿತಿ
ಸಮ್ಮೇಳನದಲ್ಲಿ ಇಂದಿನ ಕಾರ್ಯಕ್ರಮ:-
ಶುಕ್ರವಾರ ಬೆಳಿಗ್ಗೆ 9-45 ಕ್ಕೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 28 ನೇ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವರು. ಹಿರಿಯ ಸಾಹಿತಿ-ಪತ್ರಕರ್ತ ಚಿದಂಬರ ಬೈಕಂಪಾಡಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ, ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಂಸ್ಕೃತಿಕ ಕಾರ್ಯಕ್ರಮ,ಸಂಸದ ಕ್ಯಾ.ಬ್ರಿಜೇಶ್ ಚೌಟ ವಸ್ತುಪ್ರದರ್ಶನ,ಶಾಸಕ ರಾಜೇಶ್ ನಾಯ್ಕ್ ಪುಸ್ತಕ ಮತ್ತು ಇತರೆ ಮಳಿಗೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.ಹಲವಾರು ಗಣ್ಯರು ಈ ಸಂದರ್ಭ ಉಪಸ್ಥಿತರಿರುವರು.
ಬಂಟ್ವಾಳದಲ್ಲಿ 5 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ:
ಪ್ರಸ್ತುತ ದ.ಕ.ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಂಟ್ವಾಳದಲ್ಲಿ ನಡೆಯುತ್ತಿದ್ದು,ಇದಕ್ಕು ಮೊದಲು ನಾಲ್ಕು ಜಿಲ್ಲಾ ಸಾಹಿತ್ಯ ಸಮ್ಮೇಳನ ಸಂಘಟಿಸಿದ ಕೀರ್ತಿ ಬಂಟ್ವಾಳಕ್ಕಿದೆ.
2000 ನೇ ಇಸವಿಯಲ್ಲಿ ಮೊಡಂಕಾಪಿನ ದಿಒಪಿಕಾ ಪ್ರೌಢಶಾಲಾ ವಠಾರದಲ್ಲಿ,2003 ರಲ್ಲಿ ಬಂಟ್ವಾಳ ಎಸ್ ಡಿಎಂ ಸಭಾಂಗಣದಲ್ಲಿ,2011 ರಲ್ಲಿ ತಾಲೂಕಿನ ಅಳಿಕೆಯಲ್ಲಿ ಹಾಗೂ 2014 ರಲ್ಲಿ ಪೊಳಲಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿದೆ.ಇದೀಗ ಐದನೇ ಬಾರಿಗೆ ಬಿ.ಸಿ.ರೋಡಿಗೆ ಸಮೀಪದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗುತ್ತಿದೆ.
ಡಾ.ಏರ್ಯ ಲಕ್ಷೀನಾರಾಯಣ ಆಳ್ವ ಪುಸ್ತಕ ಪ್ರದರ್ಶನಗಳ ಮಳಿಗೆ-ನಿರಂಜನ ವಸ್ತು ಪ್ರದರ್ಶನ ಮಳಿಗೆಗಳು ಸಿದ್ದಗೊಂಡಿದೆ.
ಮೂವತ್ತಕ್ಕೂ ಅಧಿಕ ಪುಸ್ತಕ ಮಳಿಗೆಗಳು- ವಸ್ತು ಪ್ರದರ್ಶನಗಳ ಮಳಿಗೆಗಳು- ಕರಕುಶಲ- ಗುಡಿ ಕೈಗಾರಿಕೆ- ಕೈಮಗ್ಗ- ಆಹಾರ ಸಹಿತ ವಿವಿಧ ಮಳಿಗೆಗಳು, ಪಟ್ಟಾಂಗ ಕಟ್ಟೆ, ಉತ್ತರ ಹೇಳಿ ಪುಸ್ತಕ ಗೆಲ್ಲಿ, ಗ್ರಾಮೀಣ ಪ್ರತಿಭೆಗಳ ನೃತ್ಯ…ಇತ್ಯಾದಿಗಳೆಲ್ಲ ಸಮ್ಮೇಳನದಲ್ಲಿದೆ.
