ಬಂಟ್ವಾಳ: ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯು 49 ನೇ ವರ್ಷದ ಶ್ರೀ ಶಾರದಾ ಪೂಜಾ ಉತ್ಸವದ ಮಹಾಸಭೆಯು ರವಿವಾರ ಕಲ್ಲಡ್ಕ ದ.ಕ.ಜಿ.ಪಂ ಶಾಲಾ ವಠಾರದಲ್ಲಿ ಜರುಗಿತು.
ಈ ಸಂದರ್ಭ 49 ನೇ ವರ್ಷದ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿಗೆ  ನೂತನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನ ಅದ್ಯಕ್ಷರಾಗಿ ಗಣೇಶ್ ಶೆಟ್ಟಿ ಅವರುಆಯ್ಕೆಯಾಗಿದ್ದಾರೆ.

ಉಪಾದ್ಯಕ್ಷರಾಗಿ ಶಿವರಾಮ ಕುಕ್ಕಮಜಲು, ಜ್ಯೋತಿ ನಾಗರಾಜ್ ರಾಮನಗರ,ಪ್ರದಾನ ಕಾರ್ಯದರ್ಶಿಯಾಗಿ *ರಾಜೇಶ್.ಕೆ.,ಜೊತೆ ಕಾರ್ಯದರ್ಶಿಯಾಗಿ ರವಿ ರೈ ಕುಕ್ಕಮಜಲು,ಕೋಶಾದಿಕಾರಿಯಾಗಿ ದಿನೇಶ್ ಕೃಷ್ಣಕೋಡಿ,
ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಆಳ್ವ, ಸಂದೇಶ್ ಅಂಚನ್, ಉಷಾ ಪುರುಶೋತ್ತಮ್, ರೇಣುಕಾ ಚಂದ್ರಶೇಖರ್,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ *ಜಯಶಂಕರ ಶೆಟ್ಟಿ, ಸತೀಶ್ ಗೌಡ ಪುಷ್ಪಾಂಜಲಿ, ಲೀಲಾವತಿ ಕುಕ್ಕಮಜಲು, ಸುಧಾ ವಿಕ್ರಂ ರಾಮನಗರ,ಸಂಘಟನಾ ಕಾರ್ಯದರ್ಶಿಯಾಗಿ *ಶಶಿಕಿರಣ್ ಆಚಾರ್ಯ ರಾಮನಗರ,
ಭಜನಾ ಸಂಚಾಲಕರಾಗಿ ಸತೀಶ್ ಆಚಾರ್ಯ ರಾಮನಗರ ಮತ್ತು ಚಂದ್ರಿಕಾ ಯೋಗೀಶ್ ಕಲ್ಲಡ್ಕ ಆಯ್ಕೆಯಾದರು.  ಪ್ರತಿಷ್ಠಾನದ ಅದ್ಯಕ್ಷರಾದ ಯತೀನ್ ಕುಮಾರ್ ಪ್ರಸ್ತಾವನೆಗೈದರು. ಪ್ರತಿಷ್ಠಾನದ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ಸ್ವಾಗತಿಸಿದರು. ಪ್ರತಿಷ್ಠಾನದ ಕೋಶಾದಿಕಾರಿ ರಾಜೇಶ್ ಕೊಟ್ಟಾರಿ ವಂದಿಸಿದರು. 

By suddi9

Leave a Reply

Your email address will not be published. Required fields are marked *