ಬಂಟ್ವಾಳ: ಸ್ಫೋಟಕ ವಸ್ತುಗಳನ್ನು ಬಳಸಿ ಅಕ್ರಮವಾಗಿ ಕಪ್ಪು ಕಲ್ಲಿನ ಕೋರೆಯ ವಿರುದ್ದ ಗ್ರಾಮಸ್ಥರು ಮಂಗಳವಾರ ರಾತ್ರಿ ಹಠಾತ್ ಪ್ರತಿಭಟನೆ ನಡೆಸಿದರು.

ರಾಯಿ ಗ್ರಾಮದ ಲಕ್ಷ್ಮಿಕೋಡಿ ಎಂಬಲ್ಲಿಸ್ಪೋಟಕ ಬಳಸಿ ನಢಸಲಾಗುತ್ತಿರುವ ಕಪ್ಪುಕಲ್ಲಿನ ಗಣಿಗಾರಿಕೆಯಿಂದಾಗಿ ಹಾಗೂ ಘನ ವಾಹನಗಳ ಸಂಚಾರಿಂದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಕೋರೆಗೆ ಬರುವಂತ ವಾಹನಗಳನ್ನು ಗ್ರಾಮಸ್ಥರು ರಸ್ತೆ ಮಧ್ಯೆ ತಡೆದು ನಿಲ್ಲಿಸಿ ಪ್ರತಿಭಟಿಸಿದ್ದಾರೆ. ಲಕ್ಷ್ಮಿಕೋಡಿಯಲ್ಲಿ ಕೃಷಿ ಭೂಮಿಯಲ್ಲಿದ್ದ ಬಂಡೆಕಲ್ಲನ್ನು ತೆರವುಗೊಳಿಸುವ ನೆಪದಲ್ಲಿ ಕಪ್ಪು ಕಲ್ಲಿನ ಗಣಿಗಾರಿಕೆ ನಡೆಸಲು ನೀಡಿದ್ದ ಷರತ್ ಗಳನ್ನು ಉಲಂಘಿಸಿ ಸ್ಪೋಟಕಗಳನ್ನು ಬಳಸಲಾಗುತ್ತಿರುವುದರಿಂದ ಜನಸಾಮನ್ಯರಿಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿದೆ. ಕೊಯಿಲ- ಹೋರಂಗಳ ಕಿರಿದಾದ ರಸ್ತೆಯು ಸಂಪೂರ್ಣ ಕೆಟ್ಟು ಹೋಗಿದೆ ಎಂದು ಆರೋಪಿಸಲಾಗಿದೆ
ಹತ್ತು ದಿನಗಳ ಹಿಂದೆಯಷ್ಟೆ ಈ ರಸ್ತೆಯಲ್ಲಿ ಘನವಾಹನ ಸಂಚಾರಿಸದಂತೆ ಬಂಟ್ವಾಳ ಪೊಲೀಸರು ಸೂಚಿಸಿದ್ದರೂ ಮಂಗಳವಾರ ರಾತ್ರಿ ಮೂರುಪರಿಣಾಮ ಟ್ರಕ್ ಗಳು ಸಂಚರಿಸಿದ್ದು,ಪರಿಣಾಮ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಹಠಾತ್ ಪ್ರತಿಭಟನೆ ನಡೆಸಿ ಟ್ರಕ್ ಗಳ ಸಂಚಾರಕ್ಕೆ ತಡೆ ಒಡ್ಡಿದರು.
ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಟ್ರಕ್ ಗಳನ್ನು ವಶಕ್ಕೆ ಪಡಕೊಂಡು ಪ್ರಕರಣ ದಾಖಲಿಸಿದ್ದಾರೆ.
ಬಳಿಕ ಗ್ರಾಮಸ್ಥರು ತಮ್ಮ ಪ್ರತಿಭಟನೆಯನ್ನು ವಾಪಾಸ್ ಪಡೆದಿದ್ದಾರೆ.
ಸ್ಪೋಟಕ ಬಳಸಿ
ಗಣಿಗಾರಿಕೆ ನಡೆಸುತ್ತಿರುವುದರಿಂದ ಸ್ಥಳೀಯವಾಗಿ ಜನ ಸಾಮಾನ್ಯರು ಹಾಗೂ ಕೃಷಿಗೆ ಬಹಳ ತೊಂದರೆಯಾಗಿದೆ. ರಸ್ತೆಗಳಲ್ಲಿ ಹೊಂಡ, ಗುಂಡಿಗಳಿಂದಾಗಿ ಸುಗಮ ಸಂಚಾರಕ್ಜೆ ಅಡಚಣೆಯಾಗುತ್ತಿದೆ.ಹಾಗಾಗಿ ಗಣಿಗಾರಿಕೆಯ ಅನುಮತಿಯನ್ನು ರದ್ದುಗೊಳಿಸಿ, ತಕ್ಷಣ ಹದಗೆಟ್ಟ ರಸ್ತೆಯನ್ನು ದುರಸ್ತಿಪಡಿಸುವಂತೆ ಗ್ರಾಮಸ್ಥರು ಒತ್ತಸಯಿಸಿದ್ದಾರೆ.
