ಬಂಟ್ವಾಳ: ಹಿಂದೂ ಸಮಾಜ ಸದೃಢವಾದಾಗ ದೇಶವು ಬಲಿಷ್ಠವಾಗುತ್ತದೆ.
ಈ ನಿಟ್ಟಿನಲ್ಲಿ ಇಂತಹ ಧಾರ್ಮಿಕ ಆಚರಣೆಗಳು,ಉತ್ಸವ ಸಶಕ್ತ ಸಮಾಜದ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ನುಡಿದರು

ತುಂಬೆ ಗ್ರಾಮದ ರಾಮಲ್ ಕಟ್ಟೆ ಗೋಮಾಯಿ ಶ್ರೀ ನಾಗಬ್ರಹ್ಮ ಶ್ರೀ ನಾಗಕನ್ನಿಕೆ ದೇವಸ್ಥಾನದ 39ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಾಚನವಿತ್ತರು.
ಜಾತಿ-ಮತ, ಮೇಲು- ಕೀಳು, ಬಡವ-ಬಲ್ಲಿದ ಎಂಬ ತಾರತಮ್ಯದಿಂದ ಹಿಂದೂ ಸಮಾಜ ದಾರಿ ತಪ್ಪುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸಮಸ್ತ ಹಿಂದೂ ಸಮಾಜ ಐಕ್ಯಮತ್ಯದಿಂದ ಸಂಘಟಿತರಾಗಿ ಜಾಗೃತಿರಾಗಬೇಕಾಗಿದೆ ಎಂದ ಶ್ರೀ ಗಳು ಈ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗಿ ಇಡೀ ಗ್ರಾಮಕ್ಕೆ ಅಶ್ರಯತಾಣವಾಗಲಿ ಎಂದರು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಾಣುವ ನಾವು ಸಮಾಜದ ಕಟ್ಟಕಡೆಯ ವ್ಯಕಿಯ ಕಷ್ಟಗಳಿಗೂ ಸ್ಪಂದಿಸುವ ಗುಣ ನಮ್ಮದಾಗಬೇಕು, ನಮ್ಮ ಗಳಿಕೆಯಲ್ಲಿ ಒಂದಂಶವನ್ನು ಸಮಾಜಕ್ಕೆ ಅರ್ಪಿಸುವ ಮನೋಭಾವ ಹೊಂದಿರಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ವಿ.ಹಿಂ.ಪ ಬಂಟ್ವಾಳ ಪ್ರಖಂಡ,ಬಿ.ಸಿ.ರೋಡಿನ ಯುವ ನ್ಯಾಯವಾದಿ ಪ್ರಸಾದ್ ಕುಮಾರ್ ರೈ,ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಕೃಷಿಕರಾದ ಮೋನಪ್ಪ ಮಜಿ, ತುಂಬೆ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕರಾವಳಿ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಸುಮಿತ್ ಸಾಲ್ಯಾನ್, ಕಲಾ ಪೋಷಕ ಸದಾಶಿವ ಡಿ ತುಂಬೆ, ಪ್ರಗತಿಪರ ಕೃಷಿಕ ವಸಂತ್ ಗಾಣದ ಕೊಟ್ಟಿಗೆ, ಉದ್ಯಮಿ ಅಶೋಕ್ ಕುಲಾಲ್ ರಾಮಲ್ ಕಟ್ಟೆ, ಎಲೆಕ್ಟ್ರಿಕಲ್ ಗುತ್ತಿಗೆದಾರ ಕಿಶೋರ್ ಕುಮಾರ್, ಮಾಜಿ ಗ್ರಾ ಪಂ ಸದಸ್ಯ ಸಂಜೀವ ಪೂಜಾರಿ ರಾಮಲ್ ಕಟ್ಟೆ, ಸೋಮಪ್ಪ ಪೂಜಾರಿ ಅಬ್ಬೆಟ್ಟು,ಪ್ರದೀಪ್ ಬೊಳ್ಳರಿ,ಇಂದಿರಾ ಪ್ರದೀಪ್ ಬೊಳ್ಳಾರಿ,ಪ್ರಿಯದರ್ಶಿನಿ ಸುನೀಲ್ ದಾರಿಬಾಗಿಲು, ಕಾಶೀನಾಥ್ ಗಾಣದಲಚ್ಚಿಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ಚಂದ್ರಹಾಸ ತುಂಬೆ, ಬೇಬಿ ತುಂಬೆ,ಸಿದ್ದಪ್ಪ ಎಸ್ ಅಂಗಡಿ
ಪ್ರಿಯದರ್ಶಿನಿ ಸುನೀಲ್ ದರಿಬಾಗಿಲು ಅವರನ್ನು ಸನ್ಮಾನಿಸಲಾಯಿತು.
ಭಜರಂಗದಳದ ಪ್ರಮುಖರಾದ ವಿಜೇತ್ ಸ್ವಾಗತಿಸಿದರು, ಧನ್ಯಶ್ರೀ ತುಂಬೆ ವಂದಿಸಿದರು. ಕಲಾವಿದ ಹೆಚ್ ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು.ಯೋಗೀಶ್ ಬೊಳ್ಳಾರಿ ಸಹಕರಿಸಿದರು
ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಭಜನಾ ಸಂಕೀರ್ತನೆ,ಸ್ಥಳೀಯ ಪ್ರತಿಭೆಗಳ ನೃತ್ಯ ವೈವಿದ್ಯ ಹಾಗೂ ನಾಟಕ ಪ್ರದರ್ಶನಗೊಂಡಿತು
