ಬಂಟ್ವಾಳ : ಬಂಟರ ಸಂಘ ಕಾವಳಕಟ್ಟೆ ವಲಯವು ಬಂಟ್ಟಾಳ ತಾಲೂಕು ಮಟ್ಟದ ಬಂಟರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಮತ್ತು ರಾಷ್ಟ್ರೀಯ ಸಾಂಸ್ಕೃತಿಕ  ಸ್ಪರ್ಧೆಯಲ್ಲಿ ಬಂಟ್ಟಾಳ ತಂಡವನ್ನು ಪ್ರತಿನಿಧಿಸಿದ ವಲಯದ ಕಲಾವಿದರ ‘ಬಂಟರ ಸಮ್ಮಿಲನ – 2026’ ಕೆದ್ದಲಿಕೆಯ ಸಭಾ ಭವನದಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಕಾವಳಪಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಮಾತನಾಡಿ, ಸಮಾಜದ ಬಲವರ್ಧನೆಗೆ ಕೂಡು ಕುಟುಂಬ ಮತ್ತು ಹಿರಿಯರ ಮಾರ್ಗದರ್ಶನ ಅತ್ಯಂತ ಅವಶ್ಯ. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದರ ಜೊತೆಗೆ ಯುವಕರು ದುಶ್ಚಟಗಳಿಂದ ದೂರ ಸರಿಯಬೇಕು. ಬಂಟರ ಸಂಘದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕೂಡು ಕುಟುಂಬಭರಿತ ಹಳ್ಳಿ ಜೀವನ ಅನುಭವಗಳ ತೊಟ್ಟಿಲಾಗಿದ್ದು, ಪ್ರಸ್ತುತ ಯುವ ಸಮುದಾಯದ ನಗರ ಜೀವನದ ಒತ್ತಾಸೆಯಿಂದ ಹಳ್ಳಿ ಬದುಕನ್ನು ಮೂಲೆಗುಂಪು ಮಾಡುತ್ತಿದೆ. ಇದು ನಮ್ಮ ನೆಲದ ಸಂಸ್ಕೃತಿ,  ಸಾಂಪ್ರದಾಯ, ಭಾಷೆ ಮತ್ತು ಕಲೆಗಳ ಬೆಳವಣಿಗೆಗೆ ಮಾರಕ ಎಂದು ಅಭಿಪ್ರಾಯ ಪಟ್ಟರು.

By suddi9

Leave a Reply

Your email address will not be published. Required fields are marked *