ಬಂಟ್ವಾಳ : ಇಲ್ಲಿನ ಪುರಸಭೆಯಲ್ಲಿ ಹಲವಾರು ವರುಷಗಳಿಂದ ವಿವಿಧ ಹುದ್ದೆಗಳಲ್ಲಿ ಕನಿಷ್ಠ ವೇತನ ಮತ್ತು ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸು ತ್ತಿರುವ 58 ಮಂದಿ ನೌಕರರಿಗೆ ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ನೌಕರರು ಗುರುವಾರ ಕಚೇರಿಯೊಳಗೆ ಪ್ರವೇಶಿಸುವ ದಾರಿಯಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು.

ಬೆಳಿಗ್ಗೆ 10 ಗಂಟೆಯಿಂದ ಸಂಜೆ 3.30 ರವರೆಗೂ ಎರಡು ತಿಂಗಳ ವೇತನ ವಂಚಿತ ನೌಕರರು ಧರಣಿ ಕುಳಿತು ವೇತನ ಪಾವತಿಗೆ ಅಡ್ಡಗಾಲು ಹಾಕಿದ್ದಲ್ಲದೆ ತಮ್ಮನ್ನು ಬೀದಿಗೆ ತಳ್ಳಿದ್ದಾರೆ ಎಂದು ಆರೋಪಿಸಿ ಮುಖ್ಯಾಧಿಕಾರಿ ತೀರ್ಥಪ್ರಸಾದ್ ವಿರುದ್ಧ ದಿಕ್ಕಾರ ಕೂಗಿದರು.
ವೇತನ ವಂಚಿತ ನೌಕರರು ಎರಡನೇ ಬಾರಿಗೆ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಡಾ.ಸಂತೋಷ್,
ಎ.ಇ.ಇ.ತೇಜೋಮೂರ್ತಿ, ಎಕ್ಸಿಕ್ಯುಟಿವ್ ಇಂಜಿನಿಯರ್ ಶಂಕರ್ ಮೂರ್ತಿ ಅವರು ಪುರಸಭಾ ಕಚೇರಿಗೆ ಆಗಮಿಸಿ ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ಜೊತೆ ಚರ್ಚೆ ನಡೆಸಿದರಲ್ಲದೆ ಕೆಲ ದಾಖಲೆತ್ರವನ್ನು ಪರಿಶೀಲಿಸಿದರು.
ಮಧ್ಯಪ್ರವೇಶಿಸಿದ ಪ್ರಭು:
ಕೊನೆಗೆ ಹಿರಿಯ ಪುರಸಭಾ ಸದಸ್ಯ ಗೋವಿಂದ ಪ್ರಭು ಅವರು ಮಧ್ಯಪ್ರವೇಶಿಸಿ
ಪಿ.ಡಿ.ಡಾ.ಸಂತೋಷ್ ಜೊತೆ ಸುದೀರ್ಘ ಚರ್ಚೆ ನಡೆಸಿದರಲ್ಲದೆ ಈಹಿಂದಿನ ಎಲ್ಲಾ ಪ್ರಕ್ರಿಯೆಯ ಬಗ್ಗೆ ಗಮನಸೆಳೆದರು. ಕೊನೆಗೂ ನೌಕರರ ಪ್ರತಿಭಟನೆಗೆ ಮಣಿದ ಪಿ.ಡಿ.ಡಾ. ಸಂತೋಷ್ ಅವರು ವೇತನ ನೀಡಲು ಒಪ್ಪಿಗೆ ಸೂಚಿಸಿದರು.ಅದರಂತೆ 22 ಮಂದಿ ಹೊರಗುತ್ತಿಗೆ ನೌಕರರ ನವೆಂವರ್ ಮತ್ತು ಡಿಸೆಂಬರ್ ಎರಡು ತಿಂಗಳ ವೇತನವನ್ನು ಚೆಕ್ ಮುಖೇನ ನೀಡಿದರೆ, 7 ಮಂದಿ ಕನಿಷ್ಠ ವೇತನ ನೌಕರರ ವೇತನ ಪಾವತಿಗೆ ಕೆಲ ತಾಂತ್ರಿಕ ಸಮಸ್ಯೆಯಿದ್ದು,ಅದನ್ನು ಪರಿಹರಿಸಿ ಅತೀ ಶೀಘ್ರದಲ್ಲೇ ವೇತನ ಪಾವತಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಅದೇರೀತಿ ನೀರು ಪೂರೈಸುವವರಿಗೆ ನೀಡಲಾಗುವ ಗೌರವಧನವನ್ನು ಕೂಡ ಪಾವತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಪಿ.ಡಿ.ಯವರು ನೀಡಿದ ಭರವಸೆಯಂತೆ ನೌಕರರು ಧರಣಿಯನ್ನು ಹಿಂತೆಗೆದುಕೊಂಡರು.
ಈವರೆಗೆ ದುಡಿದ ಕಾರ್ಮಿಕರ ವೇತನ ಪಾವತಿ ಮಾಡುತ್ತೇವೆ.ಮುಂದೆ ನಿಯಮ ಪ್ರಕಾರ ಟೆಂಡರ್ ಕರೆಯಲಾಗುವುದು. ಈ ಹಿಂದೆ ತಾಂತ್ರಿಕ ಸಮಸ್ಯೆಯಿಂದಾಗಿ ವೇತನ ಅವತಿಗೆ ತೊಂದರೆಯಾಗಿದೆ.ಇದು ಯಾರಿಂದಾಗಿದೆ. ಯಾಕೆ ಆಗಿದೆ ಎಂಬುದು ಎಲ್ಲರಿಗೆ ಗೊತ್ರಿರುವ ವಿಚಾರ ಎಂದು ಪಿ.ಡಿ. ಡಾ. ಸಂತೋಷ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕು ಮೊದಲು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ ನಿಕಟಪೂರ್ವ ಸದಸ್ಯ ಹರಿಪ್ರಸಾದ್ ,ಸಾಮಾಜಿಕ ಕಾರ್ಯಕರ್ತರಾದ ರೊನಾಲ್ಡ್ ಡಿಸೋಜ ಅಮ್ಟಾಡಿ, ವಿಶ್ವನಾಥ ಗೌಡ ಮಣಿ, ಸಮ್ಮದ್ ಕೈಕಂಬ,ಹಮೀದ್ ಕೈಕಂಬ, ಪ್ರೇಮನಾಥ್ ಬಂಟ್ವಾಳ, ಗುತ್ತಿಗೆದಾರ ಭವಾನಿಶಂಕರ,ರಮಾನಾಥ ಪೈ ಬಂಟ್ವಾಳ ಮೊದಲಾದವರು ಭರವಸೆ ನೀಡಿ ವೇತನ ನೀಡದ ಮುಖ್ಯಾಧಿಕಾರಿಯವರನ್ನು ತರಾಟೆಗೂ ತೆಗೆದುಕೊಂಡರು.
ಎರಡು ತಿಂಗಳ ವೇತನ ಪಾವತಿಸುವಂತೆ ಆಗ್ರಹಿಸಿ 58 ಮಂದಿ ನೌಕರರು ಜ.7 ರಂದು ಪುರಸಭಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಮುಖ್ಯಾಧಿಕಾರಿಯವರು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿ, ಬಾಕಿ ವೇತನವನ್ನು ಪಾವತಿಸುವ ಭರವಸೆ ನೀಡಿದ್ದರು.
ಆದರೆ 10 ದಿನ ಕಳೆದರೂ ಈ ವರೆಗೂ ನೌಕರರಿಗೆ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ನೌಕರರು ಗುರುವಾರ ಎರಡನೇ ಬಾರಿಗೆ ಪ್ರತಿಭಟನೆ ನಡೆಸಿದ್ದಾರೆ. ಇದೀಗ 22 ಮಂದಿ ಎರಡು ತಿಂಗಳ ವೇತನ ಪಡೆಯವಲ್ಲಿ ಯಶಸ್ವಿಯಾಗಿದ್ದು, ಉಳಿದವರ ವೇತನವು ವಾರದೊಳಗೆ ಅವರ ಖಾತೆಗೆ ಜಮಾ ಅಗುವ ನಿರೀಕ್ಷೆ ಇದೆ.ಎರಡು ತಿಂಗಳ ವೇತನ ಸಿಗದೆ ನೌಕರರು ಜೀವನ ನಿರ್ವಹಣೆಗೆ ತೊಂದರೆ ಅನುಭವಿಸಿದ್ದರು.
ಬಾರದ ನೀರು: ಪ್ರಭಟನೆಯ ಹಿನ್ನಲೆಯಲ್ಲಿ ಪುರವಾಸಿಗಳಿಗೂ ಬಿಸಿ ತಟ್ಟಿತ್ತು.
ಬೆಳಗ್ಗೆ ಸುಮಾರು ಮೂರು ತಾಸುಗಳ ಕಾಲ ಪುರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜು ಅಗದೇ ತೊಂದರೆ ಅನುಭವಿಸಬೇಕಾಯಿತು.ಕೆಲವರು ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ,ಮುಖ್ಯಾಧಿಕಾರಿ ತೀರ್ಥಪ್ರಸಾದರಿಗೂ ಕರೆ ಮಾಡಿ ಸಮಸ್ಯೆ ತೋಡಿಕೊಂಡಿದ್ದರು.ಬಳಿಕ ನೀರು ಪೂರೈಕೆಯಾದರೆ,ಅಗತ್ಯದ ಕೆಲಸಕ್ಕಾಗಿ ಉರಸಭಾ ಕಚೇರಿಗಾಗಮಿಸಿದ ಸಾರ್ವಜನಿಕರು ನೌಕರರಿಲ್ಲದೆ ಬರಿಗೈಯಲ್ಲಿ ವಾಪಾಸ್ ಆದರು.