ಶ್ರೀದೇವಿಯ ಶಿರದಲ್ಲಿ ನಿರ್ಬಯವಾಗಿ ಕುಳಿತ ಹಕ್ಕಿ
ಬಂಟ್ವಾಳ: ಯಕ್ಷಗಾನದ ರಂಗಸ್ಥಳದಲ್ಲಿ ಒಂದೆಡೆ ಚೆಂಡೆ,ಮದ್ದಳೆಯೊಂದಿಗೆ ಮುಮ್ಮೇಳದ ಅಬ್ಬರ,ಮತ್ತೊಂದೆಡೆ ಶುಂಭ,ನಿಶುಂಭ ರಾಕ್ಷಸರ ಅರ್ಭಟ,ಇತ್ತ ಕದಂಬವನದಲ್ಲಿ ಉಯ್ಯಾಲೆಯಲ್ಲಿ ತೂಗಾಡುವ ಶ್ರೀದೇವಿಯ ಶಿರದಲ್ಲಿ ಹಕ್ಕಿಯೊಂದು ನಿರ್ಭಯವಾಗಿ ಕುಳಿತ ದೃಶ್ಯ ಶ್ರೀದೇವಿಯ ಪಾತ್ರದಾರಿ ಸಹಿತ ಯಕ್ಷಗಾನ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿತು.

ಇದು ಅಶ್ಚರ್ಯವಾದರೂ ಈ ಅಪರೂಪದ ವಿದ್ಯಮಾನ ನಡೆದಿರುವುದು ಮಂಗಳವಾರ ರಾತ್ರಿ ಸುಮಾರು11 ಗಂಟೆಯ ಹೊತ್ತಿಗೆ ಬಿ.ಸಿ.ರೋಡಿನ ಮೊಡಂಕಾಪು ಚೆನ್ನರಪಾಲು ಎಂಬಲ್ಲಿಇಲ್ಲಿನ ಡೊಂಬಯ್ಯ ಕುಲಾಲ್ ಸಹೋದರರ ವತಿಯಿಂದ ಮಂಗಳವಾರ ರಾತ್ರಿ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಯಕ್ಷಗಾನ ಮಂಡಳಿಯ 6 ನೇ ಮೇಳದಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನದ ವೇಳೆ ದೇವಿಯ ಶಿರದಲ್ಲಿ ಹಕ್ಕಿಯಿಂದು ಕೆಲಹೊತ್ತುಗಳ ಕಾಲ ಕುಳಿತು ವಿಸ್ಮಯವನ್ನುಂಟು ಮಾಡಿದೆ.

ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಶ್ರೀ ದೇವಿ ಕದಂಬ ವನದಲ್ಲಿ ಉಯ್ಯಾಲೆಯಲ್ಲಿ ತೂಗಾಡುವ ಸಂದರ್ಭ ಎಲ್ಲಿಂದಲೋ ಹಾರಿ ಬಂದ ಹಕ್ಕಿಯೊಂದು ಶ್ರೀ ದೇವಿ ವೇಷಧಾರಿ ಸಂದೀಪ್ ಕೋಳ್ಯೂರು ಅವರ ಮಡಿಲಲ್ಲಿ ಕುಳಿತಿದೆ.
ಬಳಿಕ ಅಲ್ಲಿಂದ ನಿಧಾನವಾಗಿ ಮೇಲೆರುತ್ತಾ ಶಿರದಲ್ಲಿ ಕುಳಿತಿದ್ದರೂ ಶ್ರೀ ದೇವಿ ಪಾತ್ರದಾರಿ ನಗು ನಗುತ್ತಲೆ ಹಕ್ಕಿಯ ಚಲನೆಯನ್ನು ಗಮನಿಸುತ್ತಿದ್ದರು. ಕಿರೀಟದತ್ತ ಮೇಲೇರಾಲಾಗದ ಹಕ್ಕಿ ಹಾರಲೆಯತ್ನಿಸಿದಾಗ ಶ್ರೀದೇವಿ ನಗುತಾ ಹಕ್ಕಿಯನ್ನು ಎಡಕೈಯಿಂದ ಹಿಡಿಯಲೇತ್ನಿಸಿದಾಗ ಕೈಯೊಳಗಿನಿಂದ ಮೆಲ್ಲನೆ ಜಾರಿಕೊಂಡು ಹಾರಿತು.
ಇತ್ತ ಯಕ್ಷಗಾನ ನೋಡಲು ಬಂದ ಪ್ರೇಕ್ಷಕರು ಕೂಡ ದೇವಿಯ ಶಿರ ದಲ್ಲಿ ನಿರ್ಭಯವಾಗಿ ಕುಳಿತಿರುವ ಹಕ್ಕಿಯನ್ನು ನೋಡಿ ಸಂಭ್ರಮ ಪಟ್ಟರು. ಈ ವಿಡಿಯೋ ಸಖತ್ ವೈರಲ್ ಆಗಿದೆ.



