ಶ್ರೀ ಕ್ಷೇತ್ರ ಬದನಡಿ: ಸಂಭ್ರಮದ ಷಷ್ಠಿ ಮಹೋತ್ಸವ
ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಬುಧವಾರ ನಡೆಯಿತು.ಕ್ಷೇತ್ರದ ತಂತ್ರಿಯವರಾದ ವೇ.ಮೂ. ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಅವರ ಮಾರ್ಗದರ್ಶನದಲ್ಲಿ ಆನುವಂಶಿಕ ಮೊಕ್ತೇಸರರು ಹಾಗೂ ಪ್ರಧಾನ ಅರ್ಚಕ ಕೆ.ಸುಂದರ ರಾವ್ ಮತ್ತು ಅರ್ಚಕ ನಾಗೇಶ ರಾವ್ ವಿಶೇಷ ಪೂಜೆ ನೆರವೇರಿಸಿದರು.

ಬೆಳಗ್ಗೆ ಉಷಾ ಪೂಜೆ,ಪಂಚಾಮೃತ ಅಭಿಷೇಕ,ಪವಮಾನ ಅಭಿಷೇಕ, ಭಜನೆ,ಸಜಂಕಬೆಟ್ಟು ಮನೆಯಿಂದ ದೈವಗಳ ಭಂಡಾರ ಆಗಮನ, ದೇವರ ಬಲಿ, ಭಜನೆ ಸಹಿತ ಪಲ್ಲಕಿ ಉತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.
ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ,ಬಿ.ಸಿ.ರೋಡ್ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಸಿದ್ದಕಟ್ಟೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕಿರಣ್ ಮಂಜಿಲ, ರಾಯಿ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಸಿದ್ದಕಟ್ಟೆ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು,ದೇವಸ್ಥಾನದ ವ್ಯವಸ್ಥಾಪನಾ ಸಮಿತಿಅಧ್ಯಕ್ಷ ಜಗದೀಶ ಕೊಯಿಲ, ಸಮಿತಿ ಸದಸ್ಯರಾದ ರಾಮಚಂದ್ರ ಶೆಟ್ಟಿಗಾರ್, ರವೀಂದ್ರ ಪೂಜಾರಿ,ಶಾಂತಾ ಅರುಣ್,ಲೋಕೇಶ್ ಕೈತ್ರೋಡಿ, ಸತ್ಯವತಿ,ವಾರಿಜಾ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರಿಂಕಿಜೆ ಮತ್ತು ಸದಸ್ಯರು, ಪ್ರಮುಖರಾದ ಚಂದ್ರಶೇಖರ ಆಚಾರ್ಯ ಬದಗುತ್ತು, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಿ.ದಯಾನಂದ ಸಪಲ್ಯ, ಮಾಜಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಪ್ರಕಾಶ್ ಕುಮಾರ್ ಜೈನ್, ದಿನೇಶ ಸುವರ್ಣ, ಭಜನಾ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ಮತ್ತಿತರರಿದ್ದರು.
ಸಂಜೆ ಪರಿವಾರ ದೈವಗಳ ಭಂಡಾರ ಇಳಿದು ಮೈಸಂದಾಯ ದೈವದ ನೇಮ, ಭಜನೆ, ದುರ್ಗಾ ನಮಸ್ಕಾರ ಪೂಜೆ, ರಾತ್ರಿ ರಕ್ತೇಶ್ವರಿ, ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ ದೈವಗಳ ನೇಮ ನಡೆಯಿತು



