Published On: Thu, Nov 27th, 2025

ನ.28,29,30 ರಂದು ಭಾವಾಭಿವ್ಯಕ್ತಿ ಕಾರ್ಯಕ್ರಮ

ಬಂಟ್ವಾಳ: ವಿದುಷಿ ವಿದ್ಯಾ ಮನೋಜ್ ಅವರ ನಿರ್ದೇಶನದ ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ)  ಭರತನಾಟ್ಯ ಸಂಸ್ಥೆಯ 25 ನೇ ವರ್ಷದ ಪ್ರಯುಕ್ತ” ರಜತ ಕಲಾಯಾನ” ಸರಣಿ ಕಾರ್ಯಕ್ರಮದ ಅಂಗವಾಗಿ ನ. 28,29, 30 ರಂದು ಭಾವಾಭಿವ್ಯಕ್ತಿ ಕಾರ್ಯಕ್ರಮವು ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಸಮೀಪವಿರುವ ಕಲಾನಿಕೇತನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


ಭಾನುಮತಿ ನೃತ್ಯ ಕಲಾಮಂದಿರಂ ಇದರ ನಿರ್ದೇಶಕರು ಮತ್ತು ಜೈನ್ (ಡಿಮ್ಡ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇದರ ಅತಿಥಿ ಉಪನ್ಯಾಸಕರಾಗಿರುವ ಗುರು ವಿದುಷಿ ಶೀಲಾ ಚಂದ್ರಶೇಖರ್ ಹಾಗೂ ಇದೇ ಸಂಸ್ಥೆಯಲ್ಲಿ ಸಂಶೋಧಕರಾಗಿರುವ ಮತ್ತು ಉಪನ್ಯಾಸಕರಾದ  ದೀಪ್ತಿ ರಾಧಾಕೃಷ್ಣ ಇವರು ಭರತನಾಟ್ಯ ಕಾರ್ಯಗಾರವನ್ನು ನಡೆಸಿಕೊಡಲಿದ್ದು,ನ. 28 ರಂದು ಸಂಜೆ 6 ರಿಂದ ಇವರಿಬ್ಬರ ಭರತನಾಟ್ಯ ಕಾರ್ಯಕ್ರಮವು ಕೂಡ ನಡೆಯಲಿದೆ‌ಎಂದು ಪ್ರಕಟಣೆ ತಿಳಿಸಿದೆ. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter