ಬಂಟ್ವಾಳ: ಆಟೋ ರಿಕ್ಷಾ ಚಾಲಕ,ಮಾಲಕರ ಸಂಘ ಬಿ.ಎಂ.ಎಸ್ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಮತ್ತು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿನಡೆಯಿತು.

ಸಂಘದ ಅಧ್ಯಕ್ಷ ವಸಂತ ಕುಮಾರ್ ಮಣಿಹಳ್ಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ಸಂಚಾರಿ ಪೋಲಿಸ್ ಠಾಣೆಯ ಎಸ್. ಐ.ಸುತೇಶ್, ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಗೋಪಾಲಕೃಷ್ಣ ,ಕಾನೂನು ಸಲಹೆಗಾರರಾದ ನ್ಯಾಯವಾದಿ ಪಿ. ಜಯರಾಮ ರೈ , ಪುರಸಭಾ ಸದಸ್ಯ ಗೋವಿಂದ ಪ್ರಭು , ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರೋಹಿತಾಶ್ವ ಎಂ , ಟೆಂಪೊ ಚಾಲಕ ಮಾಲಕರ ಸಂಘ ದ ಅಧ್ಯಕ್ಷ ಸದಾನಂದ ಹಳೆಗೇಟು, ಸ್ವರ್ಣೋದ್ಯಮಿ . ಸುನಿಲ್ ಬಿ. ಸಿ ರೋಡ್,ಸಂಘದ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ,ಸಂಚಾರಿ ಠಾಣೆಯ ಎಎಸ್ ಐ ಸುರೇಶ್ , ಸಂಘದ ಉಪಾಧ್ಯಕ್ಷ ಸತೀಶ್ ಭಂಡಾರಿಬೆಟ್ಟು, ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಉಸ್ತುವಾರಿ
ಅಶೋಕ್ ,ರಕ್ತ ನಿಧಿ ಸಂಚಾಲಕ ಶ್ರೀನಿಶಾಂತ್ ಉಪಸ್ಧಿತರಿದ್ದರು.
ನವೀನ್ ಪಾಣೆಮಂಗಳೂರು ಸ್ವಾಗತಿಸಿದರು , ಉಮಾಶಂಕರ್ ಪ್ರಸಾದ್ ವಂದಿಸಿದರು
