ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯಕರ್ತರು, ತಾಲೂಕು ಜನಜಾಗೃತಿ, ಒಕ್ಕೂಟದ ಸದಸ್ಯರು ಜಂಟಿಯಾಗಿ ತಾಲೂಕಿನ ಗುಡ್ಡೆಯಂಗಡಿಯಲ್ಲಿರುವ “ನಮ್ಮ ಹಿರಿಯರ ಮನೆ” ಆಶ್ರಮದಲ್ಲಿರುವ ವೃದ್ಧರಿಗೆ ಆಹಾರ ಸಾಮಗ್ರಿಗಳು ಮತ್ತು ಹಣ್ಣು ಹಂಪಲು ವಿತರಿಸುವ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಮಾಜಿಗವರ್ನರ್ ಪ್ರಕಾಶ್ ಕಾರಂತ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿ ಸೋಜಾ, ಜಿಲ್ಲಾ ನಿರ್ದೇಶಕ ದಿನೇಶ್ ಡಿ, ಶೌರ್ಯ ಘಟಕದ ಪ್ರತಿನಿಧಿ ಪ್ರವೀಣ್ ಕಾಡಬೆಟ್ಟು, ಕೇಂದ್ರ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಹಾಗೂ ಸದಾನಂದ ನಾವೂರ, ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಶ್ರೀನಿವಾಸ ಪೂಜಾರಿ, ತಾರನಾಥ ಕೊಟ್ಟಾರಿ, ಶೇಖರ ಸಾಮಾನಿ, ಸದಾನಂದ ಸೀತಾಳ, ಶಶಿಧರ ಆಚಾರ್ಯ, ದೇವಪ್ಪ ಕುಲಾಲ್, ಜನಾರ್ಧನ ಆಚಾರ್ಯ, ಆಶ್ರಮದ ಮ್ಯಾನೇಜರ್ ರಾಮಣ್ಣ ಗೌಡ, ತಾಲೂಕಿನ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರುಗಳು ಹಾಗೂ ಆಶ್ರಮದ ವೃದ್ಧರು ಉಪಸ್ಥಿತರಿದ್ದರು.
