ಪ್ರೀಮಿಯರ್ ಲೀಗ್ ಕ್ರಿಕೆಟ್ ಸಂಪನ್ನ: ಬಿಲ್ಲವ ಫ್ರೆಂಡ್ಸ್ ದಿಂಡಿಕೆರೆ ಬೈದಶ್ರೀ 2025 ಚಾಂಪಿಯನ್
ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ, ಸೇವಾ ಚಟುವಟಿಕೆಗಳಿಗೆ ಸಹಾಯಾರ್ಥವಾಗಿ
ಬಂಟ್ವಾಳ ಎಸ್‌ವಿಎಸ್ ಶಾಲಾ ಮೈದಾನದಲ್ಲಿ,ಎರಡುದಿನಗಳ ಕಾಲ ನಡೆದ ಬಂಟ್ವಾಳ ತಾಲೂಕು ಮಟ್ಟದ 12 ತಂಡಗಳ “ಬೈದ್ಯಶ್ರೀ ಪ್ರೀಮಿಯರ್ ಲೀಗ್ ” ಬಿಲ್ಲವ ಕ್ರಿಕೆಟ್ ಪಂದ್ಯಾಟದಲ್ಲಿ ನಾಗೇಶ್ ಪೂಜಾರಿ ಏಲಾಬೆ ನೆಡತೃತ್ವದ ಬಿಲ್ಲವ ಫ್ರೆಂಡ್ಸ್ ದಿಂಡಿಕೆರೆ ತಂಡ ಬೈದಶ್ರೀ ಟ್ರೋಫಿ ಗೆದ್ದುಕೊಂಡಿದೆ.

ಪೃಥ್ವಿರಾಜ್ ಮಣಿಹಳ್ಳ ಅವರ ನೇತೃತ್ವದ ಬಿರುವೆರ ಕನಸು ಮಣಿಹಳ್ಳ ದ್ವೀತೀಯ ಪ್ರಶಸ್ತಿ,
ವಿಕ್ರಮ್ ಶಾಂತಿ ಕೆರೆಕೋಡಿಗುತ್ತು ನೇತೃತ್ವದ ಶ್ರೀ ಗುರು ಫ್ರೆಂಡ್ಸ್ ಬೀಯಪಾದೆ ತೃತೀಯ ಹಾಗೂ
ರಂಜಿತ್ ಬಿಸಿರೋಡ್ ನೇತೃತ್ವದ ಬಿಲ್ಲವ ವಾರಿಯರ್ಸ್ ಬಂಟ್ವಾಳ ಚತುರ್ಥ ಪ್ರಶಸ್ತಿ ಪಡೆದುಕೊಂಡಿದೆ.
ವೈಯಕ್ತಿಕ ಪ್ರಶಸ್ತಿಗಳು :
ಬಿಲ್ಲವ ಫ್ರೇಂಡ್ಸ್ ಡಿಂಡಿಕೆರೆ ತಂಡದ ಚರಣ್ ಸರಣಿ ಶ್ರೇಷ್ಠ , ಶ್ರೀನಾಥ್ ಪಂದ್ಯಶ್ರೇಷ್ಠ , ಬಿರುವೆರೆ ಕನಸು ಮಣಿಹಳ್ಳ ತಂಡದ ಜೀವನ್ ಅತ್ಯುತ್ತಮ ಎಸೆತಗಾರ, ಜೀವನ್ ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಹಾಗೂ ಬಿಲ್ಲವ ವಾರಿಯರ್ಸ್ ತಂಡದ ಮೋಕ್ಷಿತ್ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿ ಪಡೆದುಕೊಂಡರು
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರಿಂಜೇಶ್ವರ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವೀರೇಂದ್ರ ಅಮೀನ್ ಅವರನ್ನು ಅಭಿನಂದಿಸಲಾಯಿತು
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ವಿದ್ಯಾ ರಾಕೇಶ್, ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಶ್ರೀ ನಾಲ್ಕೈತ್ತಾಯ ಪಂಜುರ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆದ್ದೇಲು ಗುತ್ತು ಜಗನ್ನಾಥ್ ನಿರ್ಮಲ್ ಬಂಗೇರ , ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಸಿದ್ದಕಟ್ಟೆ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಮಂಗಳೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಅನಿಲ್ ಕುಮಾರ್, ಕಿರಣ್ ಕೋಡಿಕಲ್ ಬಿಜೆಪಿ ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಉದ್ಯಾಮಿ ಪುರುಷೋತ್ತಮ ಕಾರಾಜೆ, ಮಣಿನಾಲ್ಕೂರು ಬಿಲ್ಲವ ಸಮಾಜ ಸೇವಾ ಸಂಘ, ಅಧ್ಯಕ್ಷ ಸಂಜೀವ ಪೂಜಾರಿ ಕಟ್ಟದಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
ಯುವವಾಹಿನಿ ಬಂಟ್ವಾಳ ಘಟಕದ ಪದಾಧಿಕಾರಿಗಳಾದ ಕಿರಣ್‌ರಾಜ್ ಪೂಂಜರೆಕೋಡಿ, ನಿಕೇಶ್ ಕೋಟ್ಯಾನ್, ನವೀನ್ ಪೂಜಾರಿ ಲೊರೆಟ್ಟೋ,ಧನುಷ್ ಮದ್ವ, ರಂಜಿತ್ ಬಿ.ಸಿ.ರೋಡ್, ನವೀನ್ ಕುಡ್ಮೇರು, ಚಿಂತನ್ ರಾಜ್ ಕಡಂಬಳಿಕೆ ಉಪಸ್ಥಿತರಿದ್ದರು.
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸ್ವಾಗತಿಸಿದರು, ಕಾರ್ಯದರ್ಶಿ ಮಧುಸೂದನ್ ಮದ್ವ ವಂದಿಸಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು



