Published On: Thu, Nov 27th, 2025

ಪೊಳಲಿ ಕ್ಷೇತ್ರದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ , ಚಿಕ್ಕರಥೋತ್ಸವ,ಉರುಳು ಸೇವೆ

ಬಂಟ್ವಾಳ: ಐತಿಹಾಸಿಕ ಹಿನ್ನಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಳದಲ್ಲಿ ಬುಧವಾರ ಷಷ್ಟಿ ಮಹೋತ್ಸವವು ಸಪನ್ನಗೊಂಡಿತು.ಇದರ ಪ್ರಯುಕ್ತ ಕ್ಷೇತ್ರದಲ್ಲಿ ಮಹಾಪೂಜೆ, ಬಲಿ ಉತ್ಸವ, ಚಿಕ್ಕ ರಥೋತ್ಸವ, ಭಕ್ತಾದಿಗಳಿಂದ  ಉರುಳು ಸೇವೆ (ಮಡಸ್ತಾನ)ನೆರವೇರಿತು.


ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು , ಚೇರಸೂರ್ಯನಾರಾಯಣ ರಾವ್ , ಕೃಷ್ಣ ಕುಮಾರ್ ಪೂಂಜ ಫರಂಗಿಪೇಟೆ,ಉಳಿಪಾಡಿಗುತ್ತು ಉದಯ ಆಳ್ವ, ಚೇರ ರಮೇಶ್ ರಾವ್, ಶ್ರೀ ಕ್ಷೇತ್ರದ. ಪವಿತ್ರಪಾಣಿ ಮೊಕ್ತೇಸರ ಮಾಧವ ಭಟ್,ಪ್ರ್ದಾನ ಅರ್ಚಕರಾದ ಶ್ರೀ ಪರಮೇಶ್ವರ ಭಟ್,  ಕೆ. ರಾಮ್ ಭಟ್ , ನಾರಾಯಣ ಭಟ್,ಕ್ಷೇತ್ರದ  ಕಾರ್ಯನಿರ್ವಹಣಾಧಿಕಾರಿ  ಕೆ.ಪಿ.ಚಂದ್ರಮೋಹನ್ ಸಹಿತ ಸ್ಥಳೀಯ ಪ್ರಮುಖರು ಹಾಜರಿದ್ದರು.

ವಿವಿಧ ಭಾಗಗಳಿಂದ ಭಕ್ತರು ಅಗಮಿಸಿ ಪವಿತ್ರವಾದ ಷಷ್ಠಿ ಮಹೋತ್ಸದಲ್ಲಿ ಭಾಗವಹಿಸಿ ಪುನೀತರಾದರು.ಹಲವಾರು ಭಕ್ತರು ಉರುಳುಸೇವೆಯಲ್ಲಿ ತೊಡಗಿಸಿ ತಮ್ಮ ಇಷ್ಠಾರ್ಥಕ್ಕಾಗಿ‌ ಪ್ರಾರ್ಥಿಸಿಕೊಂಡರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter