ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಶ್ರಮದಾನ   ಕಾಡಬೆಟ್ಟು ವಗ್ಗ   ರಸ್ತೆಗಳಲ್ಲಿ  ಬೆಳೆದ ಗಿಡ, ಹುಲ್ಲು ಕಡ್ಡಿಗಳನ್ನು ತೆಗೆದು ಸ್ಬಚ್ಛಗೊಳಿಸಿದರು.

 ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ  ದಿನೇಶ್ ಡಿ, ವಗ್ಗ ವಲಯ ಮೇಲ್ವಿಚಾರಕ ಸುರೇಶ್,  ಪಂಚಾಯತ್ ಸದಸ್ಯರಾದ ವೀರೇಂದ್ರ ಅಮೀನ್,  ಪ್ರಮೋದ್ ಕುಮಾರ್ ರೈ, ಇರ್ವತ್ತೂರ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ  ಭಾರತಿ ಶೆಟ್ಟಿ ಮೊದಲಾದವರು ಭೇಟಿ ನೀಡಿ ಸ್ವಚ್ಛತಾ ಕಾರ್ಯಕ್ಕೆ ಪ್ರೋತ್ಸಾಹಿಸಿದರು.

 ಸ್ವಚ್ಛತಾ ಕಾರ್ಯಕ್ರಮದ ಬಳಿಕ ಘಟಕದ ಮಾಸಿಕ ಸಭೆಯನ್ನು ಮಾಡಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

 ಸ್ವಚ್ಛತಾ ಕಾರ್ಯದಲ್ಲಿ  ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗದ ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕಿ‌ ರೇಖಾ ಪಿ. ಸದಸ್ಯರುಗಳಾದ ಸಂಪತ್ ಶೆಟ್ಟಿ,  ಮಹಾಬಲ ರೈ , ನಾರಾಯಣ ಶೆಟ್ಟಿ, ಆಶೋಕ್ ಬೋಲ್ಮರ್, ಜನಾರ್ದನ, ಲಕ್ಷ್ಮಣ, ಶಶಿಕಲಾ. ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *